Health

*ಪನ್ನೀರ್ ಪ್ರಿಯರಿಗೆ ಶಾಕ್: ಅಪಾಯಕಾರಿ ಅಂಶ ಪತ್ತೆ*

ಐಸ್ ಕ್ರೀಂ ಘಟಕಗಳ ಮೇಲೂ ಆಹಾರ ಇಲಾಖೆ ದಾಳಿ


ಪ್ರಗತಿವಾಹಿನಿ ಸುದ್ದಿ: ಇಡ್ಲಿ, ಹಸಿರು ಬಟಾಣಿ ಬೆನ್ನಲ್ಲೇ ಇದೀಗ ಪನ್ನೀರ್ ಪ್ರಿಯರಿಗೂ ಬಿಗ್ ಶಾಕ್. ಪನ್ನೀರ್ ನಲ್ಲಿ ಆರೋಗ್ಯಕ್ಕೆ ಹಾನಿಕರಕವಾದ ಅಂಶ ಪತ್ತೆಯಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಆಹಾರಗಳ ಗುಣಮಟ್ಟ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಆಹಾರ ಇಲಾಖೆ ಕಳಪೆ ಆಹಾರಗಳ ವಿರುದ್ಧ ಸಮರ ಸಾರಿದ್ದು, ಹಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಹೋಟೆಲ್, ಆಹಾರ ಘಟಕಗಳ ಮೇಲೆ ದಾಳಿ ನಡೆಸಿ ಅಲ್ಲಿನ ಫುಡ್ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಪನ್ನೀರ್ ಸ್ಯಾಂಪಲ್ ಟೆಸ್ಟ್ ನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

Home add -Advt

ಆಹಾರ ಇಲಾಖೆ 231 ಪನ್ನೀರ್ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದು, ಈ ಪೈಕಿ 17 ಸ್ಯಾಂಪಲ್ ಗಳ ವರದಿ ಬಂದಿದ್ದು, ಅವುಗಳಲ್ಲಿ ಎರಡು ಸ್ಯಾಂಪಲ್ ಗಳ ವರದಿ ಅನ್ ಸೇಫ್ ಎಂದು ತಿಳಿಸಿದೆ. ಪನ್ನೀರ್ ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಉಳಿದ ಸ್ಯಾಂಪಲ್ ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.

ಇನ್ನು ಐಸ್ ಕ್ರೀಂ ಘಟಗಳ ಮೇಲು ದಾಳಿ ನಡೆಸಿರುವ ಆಹಾರ ಇಲಾಖೆ ಅಧಿಕಾರಿಗಳು ಐಸ್ ಕ್ರೀಂ ಹಾಗೂ ಅದಕ್ಕೆ ಬಳಸುವ ಮಿಇಶ್ರಣಗಳ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದಾರೆ.

Related Articles

Back to top button