Karnataka News

*ಗನ್ ಹಿಡಿದು ಕ್ಯಾಮರಾಗೆ ಪೋಸ್; ಜೀಪ್ ಬಾನೆಟ್ ಮೇಲೆ ನಿಂತು ರೀಲ್ಸ್ ವಿಡಿಯೋ: ಆರೋಪಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಯುವಜನರ ರೀಲ್ಸ್ ಹುಚ್ಚಾಟಗಳು ಹೆಚ್ಚಾಗುತ್ತಿವೆ. ಆಯುಧಗಳನ್ನು ಹಿಡಿದು ಕ್ಯಾಮರಾಗೆ ಪೋಸ್ ನೀಡಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿ ಖುಷಿಪಡುವ ಜಾಯಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೋರ್ವ ಆಸಾಮಿ ಗನ್ ಹಿಡಿದು ರೀಲ್ಸ್ ಮಾಡಿದ್ದೂ ಅಲ್ಲದೇ ರಸ್ತೆಯಲ್ಲಿ ಜೀಪ್ ಬಾನೆಟ್ ಮೇಲೆ ನಿಂತು ಹುಚ್ಚಾಟ ಮೆರೆದಿದ್ದಾನೆ. ಇದೀಗ ಆರೋಪಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಕಾರಿನತ್ತ ತೆರಳುತ್ತಿರುವ ಹಾಗೂ ನಡುರಸ್ತೆಯಲ್ಲಿ ಜೀಪ್ ಬಾನೆಟ್ ಮೇಲೆ ನಿಂತು ಪೋಸ್ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆರೋಪಿ ವಿರುದ್ಧ ಮೈಸೂರಿನ ಕೃಷ್ಣರಾಜ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ವಿನೋದ್ ರೀಲ್ಸ್ ಮಾಡಿ ಹುಚ್ಚಾಟವಾಡಿದ ಆರೋಪಿ. ಮೈಸೂರಿನ ಟಿ.ಕೆ.ಬಡಾವಣೆ ನಿವಾಸಿ. ವಿಚಾರಣೆ ವೇಳೆ ವಿನೋದ್ ಅದು ನಕಲಿ ಗನ್, ಪಟಾಕಿ ಗನ್ ಎಂದಿದ್ದಾನೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಜೀಪ್ ಬಾನೆಟ್ ಮೇಲೆ ಹತ್ತಿನಿಂತು ರೀಲ್ಸ್ ಗೆ ಪೋಸ್ ನೀಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button