Belagavi NewsBelgaum NewsKannada NewsKarnataka NewsNationalPolitics
*ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಓರ್ವನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಯ ಮೇಲೆ ಬೆಳಗಾವಿ ಸಿಇಎನ್ ಪೊಲೀಸರು ದಾಳಿ ಮಾಡಿದ್ದು ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಇಂಡಿಯನ್ ಪ್ರೆಮೀಯರ್ ಲೀಗ್ ಆರಂಭ ಆಗುತ್ತಿದ್ದಂತೆ ಅಕ್ರಮವಾಗಿ ಬೆಟ್ಟಿಂಗ್ ದಂಧೆ ಜೋರಾಗುತ್ತೆ. ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸಿಇಎನ್ ಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ಓರ್ವನ ಬಂಧನವಾಗಿದೆ. ಮತ್ತೋರ್ವ ಬುಕ್ಕಿ ದಾಳಿ ವೇಳೆ ಪರಾರಿಯಾಗಿದ್ದಾನೆ.

ಬೆಳಗಾವಿಯ ಸಿಂದಿ ಕಾಲನಿ ನಿವಾಸಿ ಉದ್ಧವ್ ರೋಚಲಾನಿ ಬಂಧಿತ. ಈತನಿಂದ ದಾಳಿ ವೇಳೆ 12 ಐಫೋನ್, 13 ಬೇಸಿಕ್ ಹ್ಯಾಂಡ್ ಸೆಟ್, ಸ್ಮಾರ್ಟ್ಟಿವಿ, 2 ಲಕ್ಷ ನಗದು ಜಪ್ತಿ ಮಾಡಲಾಗಿದೆ.