
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ರಾಯಚೂರ – ಬಾಚಿ ರಾಜ್ಯ ಹೆದ್ದಾರಿ 20 ರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ ರೂ . 175 ಲಕ್ಷ ಗಳ ಅನುದಾನದಡಿ ರಾಯಚೂರ – ಬಾಚಿ ರಾಜ್ಯ ಹೆದ್ದಾರಿ 20 ರ ರಸ್ತೆ ಕಿ.ಮೀ. 344.95 ರಿಂದ 347.20 (ಗಣೇಶ ವೃತ್ತದಿಂದ ವಿಜಯನಗರ /ಹಿಂಡಲಗಾ )ವರೆಗೆ ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಹಾಗೂ ಇಲ್ಲಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.ಈ ಸಂಧರ್ಭದಲ್ಲಿ ಶಾಸಕರೊಂದಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ ಹುಲಜಿ, ಗುತ್ತಿಗೆದಾರ ಮಂಜುನಾಥ ಗರಗ, ಅಶೋಕ ತೋರಾಟ , ಶರಥ ಪಾಟೀಲ, ವಿಪುಲ್ ಜಾಧವ , ರಾಜು ಹಲಗೇಕರ , ರಾಜೇಂದ್ರ ಸುರೇಕರ, ಕಲ್ಮೇಶ ಹಾಗೂ ಇತರರು ಉಪಸ್ಥಿತರಿದ್ದರು .




