Belagavi NewsBelgaum NewsKarnataka News

*ವಿದ್ಯುತ್‌ ಅಪಘಾತ : ಪರಿಹಾರದ ಚೆಕ್‌ ವಿತರಿಸಿದ ಶಾಸಕ ಸವದಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್‌ ಅಪಘಾತದಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ ಹೆಸ್ಕಾಂ ವತಿಯಿಂದ ನೀಡಲಾದ ಪರಿಹಾರದ ಚೆಕ್ ಅನ್ನು ಶಾಸಕ ಲಕ್ಷ್ಮಣ ಸವದಿಯವರು ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು. 

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ರೈತ ಶ್ರೀಶೈಲ ಕೋಹಳ್ಳಿ ಹಾಗೂ ಶೇಗುಣಿಸಿ ಗ್ರಾಮದ ರೈತ ಶ್ರೀಕಾಂತ ಠಕ್ಕನವರ ವಿದ್ಯುತ್‌ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್‌ನ್ನು ಶಾಸಕರು ವಿತರಿಸಿದರು. 

ಈ ಸಂದರ್ಭದಲ್ಲಿ ಹೆಸ್ಕಾಂʼನ ಕಾರ್ಯನಿರ್ವಾಹಕ ಇಂಜಿನಿಯರ್‌ ಜಿ.ವಿ. ಸಂಪನ್ನವರ, ಎಒ ಬಿ.ಜಿ. ಸನದಿ, ಐಗಳಿ ಸೆಕ್ಷನ್‌ ಆಫೀಸರ್‌ ಎಂ.ಎಂ. ಯಳವಾರ, ದರೂರು ಸೆಕ್ಷನ್‌ ಆಫೀಸರ್‌ ಮಹಾವೀರ ಅವಟಿ ಸೇರಿದಂತೆ ಹೆಸ್ಕಾಂ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

Home add -Advt

Related Articles

Back to top button