ಪ್ರಗತಿವಾಹಿನಿ ಸುದ್ದಿ, ಹಳಿಯಾಳ -ಲಾರಿ ಹಾಯ್ದು ಗೋಕಾಕದ ಮಹಿಳೆ ಹಾಗೂ 30ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ.
ಹಳಿಯಾಳ ತಾಲೂಕಿನ ಕಲಘಟಗಿ ರಸ್ತೆಯ ಜನಗಾ ಕ್ರಾಸ್ ಬಳಿ ಗುರುವಾರ ಈ ಘಟನೆ ನಡೆದಿದೆ.
ಕುರಿಗಾಹಿ ಮಹಿಳೆ ಗೋಕಾಕ್ ಮೂಲದ ಶೋಭಾ ಯಲ್ಲಪ್ಪ ಕರಿಗಾರ(27) ಮತ್ತು 30 ಕುರಿಗಳ ಮೇಲೆ ಲಾರಿ ಹಾಯ್ದು ಹೋಗಿದೆ.
ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕುರಿಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದಾಗ ಕಬ್ಬು ಸಾಗಿಸುತ್ತಿದ್ದ ಲಾರಿ ವೇಗವಾಗಿ ಬಂದು ಹರಿದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ