Karnataka NewsPolitics

*ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು*

ಪ್ರಗತಿವಾಹಿನಿ ಸುದ್ದಿ; ಮುಖ್ಯಮಂತ್ರಿ ಸ್ವತಃ ಸಾರ್ವಜನಿಕರಿಗೆ  ಆರ್‌ಸಿಬಿ ಜಯದ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ, ಕಾರ್ಯಕ್ರಮದ ಪೂರ್ವಸಿದ್ಧತೆ ಮತ್ತು ಭದ್ರತೆ ಪೂರಕ ವ್ಯವಸ್ಥೆ ಮಾಡಿಲ್ಲ. ಈ ನಿರ್ಲಕ್ಷ್ಯವೇ ಅಮಾಯಕರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಬೆಂಗಳೂರಿನ ನಿವಾಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 

18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದಿದ್ದು, ಇದು ಮೂಲತಃ ವ್ಯಾಪಾರಿಕ ಮತ್ತು ಲಾಭದ ಉದ್ದೇಶ ಹೊಂದಿದ ಟೂರ್ನಿ. ಅಲ್ಲಿ ಆಟಗಾರರ ಶ್ರದ್ದೆ, ದೇಶಭಕ್ತಿಯ ಬಗ್ಗೆ ಪ್ರಶ್ನೆ ಇದೆ. ಈ ರೀತಿಯ ಲಾಭಪಡೆದುಕೊಳ್ಳುವ ಟೂರ್ನಿಗೆ ಸರ್ಕಾರದಿಂದ ಇಷ್ಟು ವೈಭವದ ಗೌರವ ಸಿಗುತ್ತಿರುವುದು ಸರಿಯಲ್ಲ.

ಹೀಗೆ ನೋಡಿದರೆ, ರಾಷ್ಟ್ರಕ್ಕಾಗಿ ಪದಕ ಗೆದ್ದ ಆಟಗಾರರು ಅಥವಾ ಯುದ್ಧದಲ್ಲಿ ಹುತಾತ್ಮರಾದ ಯೋಧರ ಮನೆಗೆ ಈ ಮಟ್ಟದಲ್ಲಿ ಗೌರವ ಇಲ್ಲ. 

ಆದರೆ ಐಪಿಎಲ್ ತಂಡವನ್ನು ಸ್ವಾಗತಿಸಲು ಡಿಸಿಎಂ ಆಗಲೇ ವಿಮಾನ ನಿಲ್ದಾಣಕ್ಕೆ ಹೋದದ್ದು ಅನ್ಯಾಯ ಎಂದು ದೂರಿನಲ್ಲಿ ಹೇಳಲಾಗಿದೆ. ಒಟ್ಟಾರೆಯಾಗಿ ಅಮಾಯಕರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗಿರೀಶ್ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

Home add -Advt

Related Articles

Back to top button