
ಪ್ರಗತಿವಾಹಿನಿ ಸುದ್ದಿ: ಪತ್ನಿ ಪದೇ ಪದೇ ಮನೆ ಬಿಟ್ಟು ಹೋಗಿತ್ತಿದ್ದಳು ಎಂಬ ಕಾರಣಕ್ಕೆ ಮನನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರು ನಗರದ ಕೆ.ಪಿ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಗೋವರ್ಧನ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಪತ್ನಿ ಪ್ರಿಯಾ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತನ ಕುಟುಂಬದವರು ಆರೋಪಿಸಿದ್ದಾರೆ.
7 ವರ್ಷಗಳ ಹಿಂದೆ ಪ್ರಿಯಾ ಹಾಗೂ ಗೋವರ್ಧನ್ ವಿವಾಹವಾಗಿದ್ದರು. ಆಗಾಗ ಪತ್ನಿ ಮನೆ ಬಿಟ್ಟು ಹೋಗುತ್ತಿದ್ದಳು. ಕಳೆದ ತಿಂಗಳು ಮನೆ ಬಿಟ್ಟು ಹೋದವಳು ವಾಪಸ್ ಆಗಿಲ್ಲ. ಇದರಿಂದ ಬೇಸತ್ತು ಗೋವರ್ಧನ್ ಸಾವಿಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.