Karnataka News

*ಲಿವಿಂಗ್ ಸಂಬಂಧದಲ್ಲಿದ್ದ ಪ್ರಿಯತಮೆಯನ್ನೇ ಕೊಂದು ಸುಟ್ಟು ಹಾಕಿದ ಪ್ರಿಯತಮ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಲಿವಿಂಗ್ ರಿಲೇಷನ್ ಶಿಪ್ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ಲಿವಿಂಗ್ ಸಂಬಂಧಗಳು ಕೊಲೆಯಂತಹ ದುರಂತ ಅಂತ್ಯಕಾಣುತ್ತಿವೆ. ಇಲ್ಲೋರ್ವ ವ್ಯಕ್ತಿ ಲಿವಿಂಗ್ ಸಂಬಂಧದಲ್ಲಿದ್ದ ತನ್ನ ಪ್ರಿಯತಮೆಯನ್ನೇ ಊರಿಗೆ ಕರೆದೊಯ್ಯುವ ಕಥೆ ಹೇಳಿ ಕೊಲೆಗೈದು ಸುಟ್ತುಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯ ಶವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇವಿಭಾಯಿ (36) ಕೊಲೆಯಾದ ಮಹಿಳೆ. ಪ್ರಕರಣ ದಾಖಲಿದ್ಸಿಕೊಂಡಿರುವ ವಾಡಿ ಠಾಣೆ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Home add -Advt

ಸೋಮುಲು ಹಾಗೂ ಆಮು ಅಲಿಯಾಸ್ ಪಪ್ಪು ಬಂಧಿತ ಆರೋಪಿಗಳು. ದೇವಿಭಾಯಿ ಹಾಗೂ ಸೋಮುಲು ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು. ತನ್ನ ಮಗಳ ಮದುವೆ ವಿಚಾರವಾಗಿ ದೇವಿಭಾಯಿ ಸೋಮುಲು ಜೊತೆ ಆಗಾಗ ಜಗಳವಾಡುತ್ತಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಸೋಮುಲು ದೇವಿಭಾಯಿಯನ್ನು ಊರಿಗೆ ಬಿಟ್ತುಬರುತ್ತೇನೆ ಎಂದು ಕಾರಿನಲ್ಲಿ ಕರೆದೊಯ್ದವನು ಆಕೆಯನ್ನು ಹತ್ಯೆ ಮಾಡಿದ್ದಾನೆ.

ಬಳಿಕ 10 ಗಂಟೆಗಳ ಕಾಲ ಕಾರಿನಲ್ಲಿಯೇ ಶವ ಇಟ್ಟುಕೊಂಡು ಓಡಾಡಿದ್ದಾನೆ. ಇದಕ್ಕೆ ಇನ್ನೋರ್ವ ಆರೋಪಿ ಕೂಡ ಸಾಥ್ ನೀಡಿದ್ದಾನೆ. ಸಾಕ್ಷ್ಯ ನಾಶಕ್ಕೆ ಲಾಡ್ಲಾಪುರ ನಿರ್ಜನ ಪ್ರದೇಶದಲ್ಲಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಬಳಿಕ ಇಬ್ಬರು ಆರೋಪಿಗಳು ಪರಾರಿಯಗಿದ್ದಾರೆ. ಇದೀಗ ಪ್ರಕರಣ ಸಂಬಂಧ ದೇವಿಭಾಯಿ ಪ್ರಿಯತಮ ಹಾಗೂ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button