
ಪ್ರಗತಿವಾಹಿನಿ ಸುದ್ದಿ: ಪೊಲೀಸರಂತೆ ವೇಷತೊಟ್ಟು ಬಂದ ಮೂವರು ಕಾಮುಕರು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ತನ್ನ ಸ್ನೇಹಿತನೊಂದಿಗೆ ದೆಹಲಿಯ ಕಲ್ಕಾಜಿ ಮಂದಿರಕ್ಕೆ ಭೇಟಿ ನೀಡಿದ್ದಳು. ದೇವರ ದರ್ಶನ ಪಡೆದ ನಂತರ ಇಬ್ಬರೂ ಸಂಜೆ 7:30ರ ಸುಮಾರಿಗೆ ದೇವಾಲಯದ ಬಳಿಯ ಉದ್ಯಾನವನಕ್ಕೆ ತೆರಳಿದ್ದರು. ಈ ವೇಳೆ 25 ರಿಂದ 30 ವರ್ಷ ವಯಸ್ಸಿನ ಮೂವರು ಅಪರಿಚಿತರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಮೂವರು ತಾವು ಪೊಲೀಸರೆಂದು ಹೇಳಿ ಇಬ್ಬರನ್ನು ಬೆದರಿಸಿ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ದೆಹಲಿ ನಿವಾಸಿಯಾಗಿರುವ ಸಂತ್ರಸ್ತೆಯನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪ್ಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪೋಕ್ಸೋ ಕೇಸ್ ಸೇರಿ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳ ಪತ್ತೆಗಾಗಿ ಪೊಲೀಸರು ಸಿಸಿ ಕ್ಯಮರಾ ಪರಿಶೀಲ್ಕನೆ ನಡೆಸಿದ್ದಾರೆ.



