Kannada NewsLatestNational

*ಶಾಲೆಗೆ ನುಗ್ಗಿ ಶಿಕ್ಷಕಿಯನ್ನೇ ಗುಂಡಿಟ್ಟು ಹತ್ಯೆಗೈದ ಮಾಜಿ ಲವರ್*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಿಯಕರನೊಬ್ಬ ಶಾಲೆಗೆ ನುಗ್ಗಿ ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. 26 ವರ್ಷದ ಶಿಕ್ಷಕಿ ನಿಶತ್ ಫಾತಿಮಾ ಳನ್ನು ಮಾಜಿ ಪ್ರಿಯಕರ ಮೊಹಮ್ಮದ್ ಸೌದ್ ಎಂಬಾತ ವಿದ್ಯಾರ್ಥಿಗಳ ಎದುರಲ್ಲೇ ಗುಂಡಿಟ್ಟು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾನೆ.

ಮೊಹಮ್ಮದ್ ಸೌದ್ ತನ್ನ ಬ್ಯಾಗ್ ನಲ್ಲಿ ಪಿಸ್ತೂಲ್ ಅಡಗಿಸಿಟ್ಟುಕೊಂಡಿದ್ದ ವಿಷಯ ಫಾತಿಮಾಳಿಗೆ ತಿಳಿದಿರಲಿಲ್ಲ. ಮಾತನಾಡಬೇಕೆಂದು ಆಕೆಯನ್ನು ಶಾಲೆಯ ಮೇಲ್ಮಹಡಿಗೆ ಕರೆದೊಯ್ದವನು ಏಕಾಏಕಿ ಶಿಕ್ಷಕಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಿಕ್ಷಕಿ ಹಾಗೂ ಸೌದ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಶಿಕ್ಷಕಿ ಆತನ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಳು. ಇದರಿಂದ ಕುಪಿತನಾದ ಸೌದ್ ಶಿಕ್ಷಕಿಯನ್ನು ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


Related Articles

Back to top button