ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನ.22 ರಂದು ಬರ್ಡೆ ಧಾಬಾ ಹತ್ತಿರ ಸರ್ವೀಸ್ ರಸ್ತೆ ಮೇಲೆ ಯಲ್ಲಪ್ಪಾ ಹಾಲಪ್ಪಾ ಗೊರವ್ (53) ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮುತ್ಯಾನಟ್ಟಿಯ ಸಂತೋಷ ಸಿದ್ದಪ್ಪ ಕೆಂಪ, ಸಿದ್ದಪ್ಪಾ ಯಲ್ಲಪ್ಪಾ ಕೆಂಪ, ಈಶ್ವರ ಹಾಲಪ್ಪಾ ಹಾಲಬಾಂವಿ, ಕಂಗ್ರಾಳಿ ಬಿ.ಕೆಯ ರವಿ ಬಸು ಕುಂಬರಗಿ, ವಿವೇಕ ಕರೆಪ್ಪಾ ನಾಯಿಕ ಕೊಲೆ ಮಾಡಿದ್ದಾಗಿ ಪತ್ತೆ ಹಚ್ಚಲಾಗಿದೆ.
ಯಲ್ಲಪ್ಪ ಬೈಕ್ ಮೇಲೆ ಹೋಗುವಾಗ ಎಲ್ಲರೂ ಕೂಡಿಕೊಂಡು ಮಾರಕಾಸ್ತ್ರಗಳಿಂದ ಹೆದ್ದಾರಿ ಪಕ್ಕದಲ್ಲೇ ನಡುರಸ್ತೆಯಲ್ಲಿ ಕೊಲೆ ಮಾಡಿದ್ದರು. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಆಯುಕ್ತ ಕೆ.ಶಿವಾರೆಡ್ಡಿ ನೇತೃತ್ವದಲ್ಲಿ, ಎಸ್.ಎಸ್.ಕೌಜಲಗಿ, ಪಿಐ ಕಾಕತಿ ಠಾಣೆ, ಮಂಜುನಾಥ ಭಜಂತ್ರಿ, ಪ್ರೊ.ಪಿಎಸ್ಐ, ಪಿ.ಕೆ.ಪರಸನ್ನವರ, ಎಎಸ್ಐ, ಕಾನಸ್ಟೆಬಲ್ ಗಳಾದ ಎ.ಬಿ.ಹುಂಡೇದ, ಬಿ.ಎಸ್.ನಾಗನ್ನವರ, ಎಂ.ಬಿ.ಕೊಟಬಾಗಿ, ಎಂ.ವ್ಹಿ.ತಳವಾರ, ಎಂ.ಡಿ.ಪೂಜೇರಿ, ವ್ಹಿ.ಎಸ್. ಪಟೇದ ಒಳಗೊಂಡ ತಂಡ ರಚಿಸಲಾಗಿತ್ತು.
ಇಂದು ಬೆಳಗಿನಜಾವ 4 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಲ್ಲಿ ಆರೋಪಿತರನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಅವರು ಅಪರಾಧಕ್ಕೆ ಉಪಯೋಗಿಸಿದ ತಲವಾರ್, ಕೋಯ್ತಾ & ಮೋಟಾರ ಸೈಕಲ್ಗಳನ್ನು ಜಪ್ತ ಮಾಡಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ