Kannada NewsKarnataka News

ವಿಷ ಸೇವಿಸಿ ರೈತ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಇಂಗಳಿ – ಸಾಲ ಬಾಧೆಯಿಂದ ಬೇಸತ್ತು ವಿಷ ಕುಡಿದ ರೈತ  ಸಾವನ್ನಪ್ಪಿದ್ದಾನೆ.

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಘಟನೆ ನಡೆದಿದೆ.

Home add -Advt

ಇಂಗಳಿ ಗ್ರಾಮದ ರೈತ ಸದಾಶಿವ ಸಾತು  ಚಿಂಚಲೆ (65)  ತಮ್ಮ ಕೃಷಿ ವ್ಯವಸಾಯಕ್ಕಾಗಿ  ಗ್ರಾಮದ ವಿವಿಧ ಸಹಕಾರಿ ಸಂಸ್ಥೆಗಳು ಹಾಗೂ ಇನ್ನಿತರ ಆರ್ಥಿಕ ಸಂಸ್ಥೆಗಳಿಂದ ಸುಮಾರು ಐದು ಲಕ್ಷ ರೂ. ಸಾಲ ಪಡೆದಿದ್ದರು.

ಇತ್ತೀಚೆಗೆ ಬಂದ ಕೃಷ್ಣಾ ನದಿ ಪ್ರವಾಹದಿಂದ ಹಾಗೂ ಅತಿವೃಷ್ಟಿಯಿಂದ ತಮ್ಮ ಹೊಲದಲ್ಲಿದ್ದ ಕಬ್ಬು ಬೆಳೆ ಹಾಗೂ ಇನ್ನಿತರ ಬೆಳೆ ನಷ್ಟವಾಗಿದ್ದರಿಂದ ಕೃಷಿ ವ್ಯವಸಾಯಕ್ಕೆ ಮಾಡಿದ ಸಾಲ ಹೇಗೆ ತೀರಿಸಬೇಕೆನ್ನುವ ಚಿಂತೆಯಲ್ಲಿ ನಿನ್ನೆ ವಿಷ ಕುಡಿದಿದ್ದರು. ಉಪಚಾರಕ್ಕಾಗಿ ಮಹಾರಾಷ್ಟ್ರ ರಾಜ್ಯದ ಮಿರಾಜ್ ಸರಕಾರಿ ಆಸ್ಪತ್ರೆಯಲ್ಲಿ  ದಾಖಲು ಮಾಡಲಾಗಿತ್ತು. ಆದರೆ ಉಪಚಾರ ಫಲಿಸದೆ ಇಂದು ಮಧ್ಯಾಹ್ನ ರೈತ ಸದಾಶಿವ ಚಿಂಚಲೆ ಸಾವನ್ನಪ್ಪಿದ್ದಾರೆ.
ಹೆಂಡತಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಹೋದರರು ಇದ್ದಾರೆ.

Related Articles

Back to top button