Belagavi NewsBelgaum NewsKannada NewsKarnataka NewsNationalPolitics

*ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್ ಶಾಸಕ* *ನನಗೆ ಸಾಕಾಗಿ ಹೋಗಿದೆ ಎಂದ ಕಾಗೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ ತಮ್ಮ ಸರ್ಕಾರದ ವಿರುದ್ಧವೇ ಗುಡುಗಿದ್ದಾರೆ.‌

ಸರ್ಕಾರದ ಲೋಪ ದೋಷಗಳ ಬಗ್ಗೆ ಕೈ ನಾಯಕರು ಅಸಮಾಧಾನಗೊಂಡಿದ್ದು ಬಿ ಆರ್ ಪಾಟೀಲ್‌ ಹೇಳಿಕೆ ಚರ್ಚೆ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಬ್ಬ ಕೈ ಶಾಸಕ ಆಕ್ರೋಶ ಹೊರಹಕಿದ್ದಾರೆ.

ಇಂದು ಐನಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಆಗಮಿಸಿದ್ದ ಶಾಸಕ ರಾಜು ಕಾಗೆ ಸರ್ಕಾರದ ಲೋಪ ದೋಷಗಳ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಸರ್ಕಾರ ಅನುದಾನ ಬಿಡುಗಡೆಯಲ್ಲೂ ವಿಳಂಬ ತೋರತ್ತಿದೆ. ನಾನು ಈಗಾಗಲೇ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೂ ಕೂಡ ವರ್ಕ್ ಆರ್ಡ‌ರ್ ಸಿಗುತ್ತಿಲ್ಲ. ನನಗೆ ಸಾಕಾಗಿ ಹೋಗಿದೆ. ಬಿ ಆರ್ ಪಾಟೀಲ ಹೇಳಿಕೆಯನ್ನ ನಾನು ಬೆಂಬಲಿಸುತ್ತೇನೆ ಎಂದು ನೇರವಾಗಿ ಸ್ವ ಪಕ್ಷದ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button