
ಪ್ರಗತಿವಾಹಿನಿ ಸುದ್ದಿ: ನಾಡಬಾಂಬ್ ಸ್ಫೋಟಗೊಂಡು ವಕೀಲರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಮನಗರದ ಹಾರೋಹಳ್ಳಿ ತಾಲೂಕಿನ ಸುಂಡಗಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ಮೋಹನ್ ಗಾಯಗೊಂಡ ವಕೀಲ. ಮೋಹನ್ ಸುಂಡಗಟ್ಟ ಗ್ರಾಮದಲ್ಲಿ ಫಾರ್ಮ್ ಹೌಸ್ ಹೊಂದಿದ್ದರು. ಗುರುವಾರ ತಡರಾತ್ರಿ ತಮ್ಮ ಫಾರ್ಮ್ ಹೌಸ್‌ಗೆ ಬಂದು ತಂಗಿದ್ದರು ಎನ್ನಲಾಗಿದೆ.
ಈ ವೇಳೆ ಯಾರೋ ಕಿಡಿಗೇಡಿಗಳು, ಫಾರ್ಮ್ ಹೌಸ್‌ನ ಗೇಟ್ ಬಳಿ ನಾಡಬಾಂಬ್ ಇಟ್ಟಿದ್ದಾರೆ. ಇಂದು ಮುಂಜಾನೆ ಮೋಹನ್ ಫಾರ್ಮ್ ಹೌಸ್‌ನಿಂದ ಹೊರಬಂದಾಗ, ಗೇಟ್ ಬಳಿ ಇಟ್ಟಿದ್ದ ನಾಡಬಾಂಬ್ ಗಮನಿಸದೇ ಅದರ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ನಾಡಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ವಕೀಲ ಗಂಭೀರವಗೈ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.




