CrimeKarnataka NewsLatest

*ತಮ್ಮನ ಮೇಲೆ ಅಣ್ಣನಿಂದಲೇ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ತೋಟದಲ್ಲಿ ನೀರು ಕಟ್ಟುವ ವಿಚಾರಕ್ಕೆ ಅಣ್ನ-ತಮ್ಮನ ನಡಿವೆ ಕಿರಿಕ್ ಆಗಿ ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನೇ ತಮ್ಮನ ಮೇಲೆ ಗುಂಡಿನ ದಾಳಿ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತಾರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಶಟ್ಟರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾಡಬಂದೂಕಿನಿಂದ ತಮ್ಮ ನ ಮೇಲೆ ಚಂದ್ರಶೇಖರ್ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ತಮ್ಮ ಚೇತನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಗಲಾಟೆ ಮಾಡುತ್ತಿದ್ದ ಚಂದ್ರಶೇಖರ್ ನನ್ನು ರೂಮಿನಲ್ಲಿ ಕೂಡಿಹಾಕಲಾಗಿತ್ತು. ಸಹೋದರ ಚೇತನ್ ಮರದ ಕೆಳೆಗೆ ಕುಳಿತಿದ್ದ. ಮರದ ಕೆಳೆಗೆ ಕುಳಿತಿದ್ದ ತಮ್ಮನ ಮೇಲೆ ಕಿಟಕಿ ಮೂಲಕ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ.

ಘಟನೆ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button