
ಪ್ರಗತಿವಾಹಿನಿ ಸುದ್ದಿ: ಹಾಸನದಲ್ಲಿ ಹೃದಯಘಾತದಿಂದ ಸರಣಿ ಸಾವುಗಳು ಸಂಭವಿಸುತ್ತಿದೆ. ಬಾಣಂತಿಯೋರ್ವಳು ಮೃತಪಟ್ಟಿರುವ ಘಟನೆ ನಡೆದಿದ್ದು, ಎರಡು ತಿಂಗಳಲ್ಲಿ ಹೃದಯಸ್ಥಂಭನ ಸಾವುಗಳ ಸಂಖ್ಯೆ 25 ಕ್ಕೆ ಏರಿಕೆಯಾಗಿದೆ.
ಆಯನೂರು ಗ್ರಾಮದ ಹರ್ಷಿತಾ( 25) ಮೃತ ದುರ್ದೈವಿ. ಎದೆನೋವು ಕಾಣಿಸಿಕೊಂಡ ಹಿನ್ನೆಲಯಲ್ಲಿ ನಿನ್ನೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಪ್ರಯತ್ನ ಫಲಿಸದೇ ಹರ್ಷಿತಾ ಸಾವನ್ನಪ್ಪಿದ್ದಾರೆ.
ಒಂದೂವರೆ ತಿಂಗಳ ಹಸುಗೂಸು ಸಹ ಇತ್ತು. ಕೊಮ್ಮೆನಹಳ್ಳಿಯ ಗಂಡನ ಮನೆಯಿಂದ ಆಯನೂರಿನಲ್ಲಿರುವ ತವರಿಗೆ ಬಾಣಂತನಕ್ಕಾಗಿ ಹರ್ಷಿತಾ ಆಗಮಿಸಿದ್ದರು.