Belagavi NewsBelgaum NewsKannada NewsKarnataka NewsPolitics

ಲಿಂಗಾಯಿತ ಧರ್ಮ ಹೋರಾಟದ ಮೂರನೇ ಘಟ್ಟ ಆರಂಭಿಸಿದ್ದೇ ಫ.ಗು.ಹಳಕಟ್ಟಿ; ಬಸವರಾಜ್ ರೊಟ್ಟಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಲಿಂಗಾಯಿತ ಧರ್ಮದ ಹೋರಾಟ ನಡೆದಿದ್ದು ಮೂರು ಘಟ್ಟಗಳಲ್ಲಿ ಆ ಪೈಕಿ ಹೋರಾಟದ ಮೂರನೇ ಘಟ್ಟವನ್ನು ಆರಂಭಿಸಿದ್ದೆ ವಚನ ಪಿತಾಮಹ ಫ.ಗು. ಹಳಕಟ್ಟೆಯವರು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಪ್ರತಿಪಾದಿಸಿದರು. 

ಅವರಿಂದು ಜಾಗತಿಕ ಲಿಂಗಾಯಿತ ಮಹಾಸಭೆಯಲ್ಲಿ ನಡೆದ ಫ.ಗು. ಹಳಕಟ್ಟಿ ಅವರ 145 ಜನ್ಮದಿನೋತ್ಸವದ ಅಂಗವಾಗಿ ನಡೆದ ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಮೊದಲ ಬಾರಿಗೆ ಬಸವಣ್ಣನವರಿಂದ ಆರಂಭವಾದ ಲಿಂಗಾಯಿತ ಧರ್ಮದ ಹೋರಾಟ ಕಲ್ಯಾಣ ಕ್ರಾಂತಿಯಲ್ಲಿ ಅಂತ್ಯಗೊಂಡಿತು. ನಂತರ 300 ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಹೋರಾಟ ಪುನಃ 15ನೇ ಶತಮಾನದಲ್ಲಿ ವಿಜಯನಗರದ ಅರಸು ಪ್ರೌಢ ದೇವರಾಯರು ವಚನ ಸಾಹಿತ್ಯಕ್ಕೆ ನೀಡಿದ ಮಹತ್ವದಿಂದ ಪುನರುತ್ಥಾನಗೊಂಡಿತು. ಇದಾದ ಮೇಲೆ ಫ.ಗು. ಹಳಕಟ್ಟಿಯವರು ಕೈಗೊಂಡ ವಚನ ಸಾಹಿತ್ಯದ ಸಂಗ್ರಹ, ವಚನ ಸಾಹಿತ್ಯದ ಮುದ್ರಣ ಮತ್ತು ವಚನ ಸಾಹಿತ್ಯದ ಸಂಶೋಧನೆಯೊಂದಿಗೆ ಲಿಂಗಾಯಿತ ಧರ್ಮದ ಮೂರನೇ ಹೋರಾಟ ಆರಂಭವಾಯಿತೆಂದು ಅವರು ಹೇಳಿದರಲ್ಲದೆ ಅತ್ಯಮೂಲ್ಯವಾದ ವಚನ ಸಾಹಿತ್ಯವನ್ನು ಜಗತ್ತಿಗೆ ನೀಡಿದ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿಕ್ಕೋಡಿ ಜಿಲ್ಲಾ ಜಾಗತೀಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಗುಡಶಿ ಅವರು ಮಾತನಾಡಿ ವಚನ ಸಾಹಿತ್ಯವನ್ನು ಕಲೆ ಹಾಕಲು ಮತ್ತು ಅವುಗಳನ್ನು ಜತನವಾಗಿರಿಸಲು ಅವನ್ನು ಮುದ್ರಿಸಿ ಕಾಪಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಾಗೂ ಬಸವಾದಿ ಶರಣರ ವಚನಗಳನ್ನು ಜಗತ್ತಿಗೆ ಮುಟ್ಟಿಸುವ ಕಾರ್ಯಕ್ಕಾಗಿ ತಮ್ಮ ಮನೆಮಠಗಳನ್ನು ಮಾರಿಕೊಂಡರು ಇಂಥ ಮಹಾನ್ ಶರಣರನ್ನು 770 ಅಮರ ಗಣಂಗಳ ಜೊತೆ 771ನೇ ಅಮರ ಗಣಂಗಳು ಎನ್ನಬಹುದು ಎಂದರು. 

Home add -Advt

ನೈನಾ ಗಿರಿಗೌಡರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಲಿಂಗಾಯಿತ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಸ್ವಾಗತಿಸಿದರು, ಉಪಾಧ್ಯಕ್ಷ ಮುರುಗೇಶ್ ಶಿವಪೂಜಿ ವಂದಿಸಿದರು, ಸಿ. ಎಮ್.ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಅಡಿವೆಪ್ಪ ಬೆಂಡಿಗೇರಿ, ಹಳಕಟ್ಟಿ ಅವರ ವಂಶಜರಾದ ರಾಜಶೇಖರ ಭೋಜ, ಇತರ ಪದಾಧಿಕಾರಿಗಳಾದ ಮುರುಗೆಪ್ಪ ಬಾಳಿ, ಮೋಹನ್ ಗುಂಡ್ಲುರ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button