
ಪ್ರಗತಿವಾಹಿನಿ ಸುದ್ದಿ: ಬೈಕ್ ಅಪಘಾತದಲ್ಲಿ ಯೋಗ ಗುರು, ಹರಿಹರ ಪೀಠದ ವಚನಾನಂದ ಶ್ರೀಗಳ ಸಹೋದರ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಶೋಕ್ ಗೌರಗೊಂಡ ಮೃತರು. ಅಥಣಿಯ ಭರಮಕೋಡಿ ಬಳಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಾಂವಶಿ ಗ್ರಾಮದಿಂದ ಅಥಣಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಗೆ ನಾಯಿಯೊಂದು ಅಡ್ಡಬಂದ ಪರಿಣಾಮ ಬೈಕ್ ಡಿಕ್ಕಿಹೊಡೆದಿದೆ.
ಘಟನಾ ಸ್ಥಳದಲ್ಲೇ ಅಶೋಕ್ ಮೃತಪಟ್ಟಿದ್ದಾರೆ. ಅಶೋಕ್ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.