
ಪ್ರಗತಿವಾಹಿನಿ ಸುದ್ದಿ: 7 ವರ್ಷದ ಬಾಲಕಿ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಚಿಪ್ಸ್ ಖರೀದಸಲೆಂದು ಅಂಗಡಿಗೆ ಬಂದಿದ್ದ ಬಾಲಕಿ ಮೇಲೆ ಕಿರಾತಕ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ 20 ವರ್ಷದ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.
ಅಂಗಡಿಯಲ್ಲಿ ಕಾಮುಕ ಯುವಕ ಕೆಲಸ ಮಾಡುತ್ತಿದ್ದ. ಈ ವೇಳೆ ಬಾಲಕಿ ಚಿಪ್ಸ್ ಖರೀದಿಸಲು ಅಂಗಡಿಗೆ ಬಂದಿದ್ದಾಳೆ. ಈ ವೇಳೆ ಆರೋಪಿ ಗೋಡೌನ್ ನಲ್ಲಿ ಚಿಪ್ಸ್ ಇದೆ, ಕೊಡುತ್ತೇನೆ ಎಂದು ಹೇಳಿ ಬಾಲಕಿಯನ್ನು ನಂಬಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಪೋಷಕರು ನೀಡಿರುವ ದೂರಿನ ಮೇಲೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.