Kannada NewsKarnataka NewsLatest

*ಡಿಪ್ಲೋಮಾ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸೂರತ್ಕಲ್ ಬಳಿ ಈ ಗಹ್ಟನೆ ನಡೆದಿದೆ. ಅಫ್ತಾಬ್ (18) ಮೃತ ವಿದ್ಯಾರ್ಥಿ. ಮಂಗಳೂರು ಹೊರವಲಯದ ಸುರತ್ಕಲ್ ನ ಕೃಷ್ಣಾಪುರದಲ್ಲಿ ಅಫ್ತಾಬ್ ಕುಟುಬ ವಾಸವಾಗಿತ್ತು.

ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಅಫ್ತಾಬ್, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ಅಫ್ತಾಬ್ ಸುರತ್ಕಲ್ ನ ಸೆಕ್ರೆಡ್ ಹಾರ್ಟ್ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಓದುತ್ತಿದ್ದ.

Home add -Advt

Related Articles

Back to top button