ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಮತ್ತೆ ಕಾಂಗ್ರೆಸ್ ಜೊತೆ ಸಖ್ಯ ಬೆಳೆಸುವ ಸಾಧ್ಯತೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಬೀಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ನಾವು ಕಾಂಗ್ರೆಸ್ ಜೊತೆ ಸೇರಿದರೆ ತಾನೆ ಬಿಜೆಪಿ ಸರಕಾರ ಬೀಳುವುದು? ನಮಗೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಕಾಗಿ ಹೋಗಿದೆ. ಮತ್ತೆ ಅವರೊಂದಿಗೆ ಹೋಗುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಪಕ್ಷ ಕಟ್ಟಬೇಕಾಗಿದೆ. ಬಿಜೆಪಿಗೆ 105 ಸ್ಥಾನದ ಬಲವಿದೆ. ಕಾಂಗ್ರೆಸ್ ಹೇಗೆ ಸರಕಾರ ಮಾಡಲು ಸಾಧ್ಯವಿದೆ? ನಾವು ಮತ್ತೆ ಅವರೊಂದಿಗೆ ಹೋಗಲು ಸಾಧಯವೇ ಇಲ್ಲ ಎಂದು ಹೇಳಿದರು.
ಹನಿ ಟ್ರ್ಯಾಪ್ ಸಿಬಿಐಗೆ ಒಪ್ಪಿಸಲಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣವನ್ನು ಯಡಿಯೂರಪ್ಪ ಸಿಬಿಐಗೆ ಒಪ್ಪಿಸಲಿ ಎಂದಿದ್ದಾರೆ.
ಹನಿಟ್ರ್ಯಾಪಿ ಆಡಿಯೋದ ಧ್ವನಿ ಕೇಳಿದರೆ ಸಾಹುಕಾರರ ಧ್ವನಿ ಕೇಳಿದ ಹಾಗೆ ಕಾಣಿಸುತ್ತದೆ. ನನಗೆ ಗೊತ್ತಿಲ್ಲ, ಯಡಿಯೂರಪ್ಪ ಇದನ್ನೂ ಸಿಬಿಐಗೆ ಒಪ್ಪಿಸಿದರೆ ನಿಜಾಂಶ ಏನೆಂದು ಗೊತ್ತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಅವರು ಜಾತಿ ಬಿಟ್ಟು ರಾಜಕಾರಣ ಮಾಡುವವರಲ್ಲ. ಅವರನ್ನು ನಂಬಿಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದರು.
ಜೋರಾಗಿದೆ ಕಾಂಗ್ರೆಸ್ -ಜೆಡಿಎಸ್ ಮರುವಿವಾಹಕ್ಕೆ ಸಿದ್ಧತೆ
ರಮೇಶ ಜಾರಕಿಹೊಳಿ ವಿರುದ್ಧ ಎಚ್ಡಿಕೆ ವಾಗ್ದಾಳಿ: ಸೋಮವಾರ ದೇವೇಗೌಡ ಆಗಮನ
ಕಾಂಗ್ರೇಸ್ ಮತ್ತು ಜೆಡಿಎಸ್ ಗೆ 3 ತಿಂಗಳಿಗೊಮ್ಮೆ ಚುನಾವಣೆ ಬೇಕಾಗಿದೆ- ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ