
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶವನ್ನೆ ಬೆಚ್ಚಿ ಬಿಳಿಸಿದ ಗುಜರಾತನ ಅಹಮದಾಬಾದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇದೀಗ ನಿಖರ ಕಾರಣ ಬಹಿರಂಗ ಆಗಿದೆ.
270 ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ವಿಮಾನ ದುರಂತಕ್ಕೆ ಇಂಧನ ಸ್ವಿಚ್ ಆಫ್ ಆಗಿದ್ದೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಇಂಧನ ಸ್ವಿಚ್ ಅಫ್ ಆಗಿದೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಪೈಲೆಟ್, ಸಹ ಪೈಲೆಟ್ ಇಂಧನ ಸ್ವಿಚ್ ಆಫ್ ಯಾಕೆ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಹ ಪೈಲೆಟ್ ಇಲ್ಲ ನಾನು ಏನು ಮಾಡಿಲ್ಲ. ಎಂದು ಹೇಳುವುದು ವಿಮಾನದಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದೆ.
ಇಂಧನ ಸ್ವಿಚ್ ಆಫ್ ಆಗುತ್ತಿದ್ದಂತೆ ವಿಮಾನದ ಎರಡು ಇಂಜಿನ್ ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಸ್ವಿಚ್ ಆಫ್ ಆದ 32 ಸೆಕೆಂಡ್ ಗೆ ವಿಮಾನ ಹಾಸ್ಟೆಲ್ ಗೆ ಡಿಕ್ಕಿ ಹೊಡೆದು ಪತನವಾಗಿದೆ.
ಸದ್ಯ ಪ್ರಾಥಮಿಕ ವರದಿಯ ಪ್ರಕಾರ, ಇಂಧನದ ಇಂಜಿನ್ ಆಫ್ ಆಗಿದ್ದೇ ಘಟನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆದರೆ ಅದ್ಯಾಗೆ ಸ್ವಿಚ್ ಆಫ್ ಆಗಿದೆ ಎಂಬುವುದರ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.