Kannada NewsKarnataka NewsLatest

*ಹೃದಯಾಘಾತ: ದೇವಸ್ಥಾನದ ಅರ್ಚಕ ಸಾವು*

ಮೈಸೂರು: ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕೆ ಹೆಚ್ಚುತ್ತಿದೆ. ಮೈಸೂರಿನಲ್ಲಿ ಹೃದಯಾಘಾತಕ್ಕೆ ಅರ್ಚಕರೊಬ್ಬರು ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಈ ಘಟನೆ ನಡೆದಿದೆ. ಸಂಪತ್ ಕುಮಾರ್ (66) ಮೃತರು. ಸಂಪತ್ ಕುಮಾರ್ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.

ಮೂಲತಃ ಚಾಮರಾಜನಗರದ ಯಳಂದೂರು ನಿವಾಸಿಯಗಿರುವ ಸಂಪತ್ ಕುಮಾರ್ ಟಿ.ನರಸಿಪುರದಲಿ ದೇವಸ್ಥಾನದ ಅರ್ಚಕರಾಗಿದ್ದರು. ತಡರಾತ್ರಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡವರಿಗೆ ಹೃದಯಾಘಾತವಾಗಿದ್ದು,ಇದ್ದಕ್ಕಿದ್ದಂತೆ ಕೊನೆಯುಸಿರೆಳೆದಿದ್ದಾರೆ.

Home add -Advt

Related Articles

Back to top button