
ಪ್ರಗತಿವಾಹಿನಿ ಸುದ್ದಿ: ಕೋತಿಗಳ ದಾಳಿಗೆ ಬಾಲಕಿ ಸಾವನ್ನಪ್ಪಿರುವ ಘಟನೆ ಹೋಸಪೇಟೆ ನಗರದ ಚಲುವಾದಿ ಕೇರಿಯಲ್ಲಿ ನಡೆದಿದೆ.
ಕೋತಿಗಳ ದಾಳಿಗೆ ತೀವ್ರ ಗಾಯಗೊಂಡಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಕೋತಿ ದಾಳಿಯಿಂದ ಮೃತಪಟ್ಟ ಬಾಲಕಿಯನ್ನು ಮೂರುವರೆ ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ.
ಮೊಸರು ತರಲೆಂದು ಅಂಗಡಿಗೆ ಹೋಗುತ್ತಿದ್ದಾಗ ಕೋತಿ ದಾಳಿ ಮಾಡಿದೆ. ಬಳಿಕ ಬಾಲಕಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಬಾಲಕಿ ಕೋಮಾಗೆ ಹೋಗಿದ್ದಳು. ಚಿಕಿತ್ಸೆ ಮುಂದುವರಿಸಿದ್ದರೂ ಫಲಕಾರಿ ಆಗದೆ ಬಾಲಕಿ ಮೃತಪಟ್ಟಿದ್ದಾಳೆ.
ಒಂದು ವಾರದ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಸೂಕ್ತ ಪರಿಹಾರ ನೀಡುವಂತೆ ಕುಟುಂಬದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.