Kannada NewsKarnataka NewsLatestLife StyleNationalTechTravelWorld
*ಇಂದೆ ಭೂಮಿಗೆ ವಾಪಸ್ ಆಗುತ್ತಿದ್ದಾರೆ ಗಗನಯಾತ್ರಿ ಶುಭಾಂಶು ಶುಕ್ಲಾ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗಗನಯಾತ್ರೆ ಮುಗಿಸಿ ಭೂಮಿಗೆ ವಾಪಸ್ ಬರಲು ಪ್ರಯಾಣ ಆರಂಭಿಸಿದ್ದು, ನಾಸಾದ ವೇಳಾಪಟ್ಟಿಯ ಪ್ರಕಾರ, ಜುಲೈ 15, ಅಂದರೆ ಇಂದು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸ್ಪ್ಯಾಶ್ಡೌನ್ ನಿರೀಕ್ಷಿಸಲಾಗಿದೆ.
ಆಕ್ಸಿಯಮ್ -4 ಮಿಷನ್’ನ ಮೂವರು ಸಹ ಸಿಬ್ಬಂದಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳನ್ನ ಕಳೆದ ನಂತರ ಶುಭಾಂಶು ಶುಕ್ಲಾ ಅವರೊಂದಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದಾರೆ.
ಭಾರತೀಯ ಕಾಲಮಾನ ಸೋಮವಾರ ಸಂಜೆ 4:50ರ ಸುಮಾರಿಗೆ ಭಾರತೀಯ ಕಾಲಮಾನ ಅವರ ಪ್ರಯಾಣ ಪ್ರಾರಂಭವಾಗಿದೆ. ನಾಸಾ ಪ್ರಕಾರ, ಅವರ ಟ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಅನ್ಡಾಕ್ ಮಾಡಿದ ನಂತರ ಕೆಲವು ವಿಳಂಬಗಳನ್ನ ಕಾಣಿಸಿವೆ. ಆದರೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ ಎಂದು ನಾಸಾ ತಿಳಿಸಿದೆ.