Film & EntertainmentKannada NewsKarnataka NewsPolitics

*ಸಿನಿ ಪ್ರಿಯರಿಗೆ ಗುಡ್ ನ್ಯೂಸ್: ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ*

ಪ್ರಗತಿವಾಹಿನಿ ಸುದ್ದಿ: ಮಲ್ಟಿ ಪ್ಲೆಕ್ಸ್ ಗಳಲ್ಲಿ ಸಿನಿ ಪ್ರಿಯರಿಂದ ಬೇಕಾ ಬಿಟ್ಟಿಯಾಗಿ ಹಣ ವಸೂಲಿ ಮಾಡಲಾಗುತ್ತಿತ್ತು, ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬ್ರೆಕ್ ಹಾಕಿದ್ದು, ರಾಜ್ಯದಲ್ಲಿ ಏಕರೂಪದ ದರ ಜಾರಿ ಮಾಡಿ ಆದೇಶ ಹೋರಡಿಸಿದ್ದಾರೆ. 

ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿ ಮಾಡಿ ಎಂದು ಸರ್ಕಾರ ಆದೇಶಿಸಿ, ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂ. ಮೀರಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯ ಆಗಲಿದೆ. ಕನ್ನಡದ ಚಿತ್ರಗಳಿಗೆ ನಿರೀಕ್ಷಿತ ಪ್ರಮಾಣದ ಪ್ರೇಕ್ಷಕರು ಬಾರದೇ ಇರುವುದರಿಂದ ಅನೇಕ ಚಿತ್ರಮಂದಿರಗಳನ್ನು ಮುಚ್ಚಲಾಗಿದೆ. 

ಆದರೆ ರಾಜ್ಯದಲ್ಲಿ ಪರಭಾಷೆ ಸಿನಿಮಾಗಳು ಮಾತ್ರ ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಹೀಗಾಗಿ ಈಗ ಎಲ್ಲಾ ಭಾಷೆಗಳಿಗೂ ಸೇರಿದಂತೆ ಏಕರೂಪ ದರ ಫಿಕ್ಸ್ ಮಾಡಲಾಗಿದೆ.

Home add -Advt

Related Articles

Back to top button