Belagavi NewsBelgaum NewsKannada NewsKarnataka NewsPolitics

*ಹೊನ್ನಿಹಾಳದಲ್ಲಿ ವಿವಿಧ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: ಹೊನ್ನಿಹಾಳ ಗ್ರಾಮದಲ್ಲಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆಯ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಭಾನುವಾರ ಭೂಮಿ‌ ಪೂಜೆ‌ ನೆರವೇರಿಸಿ, ಚಾಲನೆ ನೀಡಿದರು.

ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಗುಣಮಟ್ಟದ ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಕೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಳೆದ 7 ವರ್ಷದಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಹಿಂದೆ ರಸ್ತೆ, ಗಟಾರ ವ್ಯವಸ್ಥೆಗಳಿಲ್ಲದೆ ಜನರು ದಿನನಿತ್ಯದ ಚಟುವಟಿಕೆಗಳಿಗೆ ಪರದಾಡುವ ಪರಿಸ್ಥಿತಿ ಕ್ಷೇತ್ರದಾದ್ಯಂತ ಇತ್ತು. ಆದರೆ ಇಂದು ಯಾವ ಪ್ರದೇಶವೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿಲ್ಲ. ಹಾಗಾಗಿ ಪಕ್ಷಭೇದ ಮರೆತು ಎಲ್ಲರೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆನ್ನಿಗೆ ನಿಲ್ಲಬೇಕು ಎಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಸುರೇಖಾ ಕಟಬುಗೋಳ, ಪ್ರಕಾಶ ಕಡ್ಯಾಗೋಳ, ಶಿವಾನಂದ ಮಠದ, ಲಕ್ಷ್ಮಣ ಮಲ್ಲಮ್ಮಗೋಳ, ಗುಂಡು ತಳವಾರ, ರಾಜು ತಳವಾರ, ಯಶವಂತ ಕಾಕಾ, ಗಣಪತಿ ಸುಳಗೇಕರ್, ಶಿವನಪ್ಪ ಕೆಂಗೇರಿ, ಸುರೇಶ ಕೆಂಗೇರಿ, ಮಹಾದೇವ್ ತಳವಾರ್, ದಾದಾಫೀರ್ ಸಾಂಬ್ರೇಕರ್, ಸುರೇಶ ಕಟಬುಗೋಳ, ಮಹೇಶ ಜೋಗನ್ನವರ್, ರಾಕೇಶ್ ಪಾಟೀಲ, ಅಪ್ಸರ್, ಉಳವಪ್ಪ ಮಲ್ಲಣ್ಣವರ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Home add -Advt

Related Articles

Back to top button