*ಜೊಲ್ಲೆ ಗ್ರೂಪ್ ವತಿಯಿಂದ JEE,NEET ವಿಧ್ಯಾರ್ಥಿಗಳಿಗೆ ಒಟ್ಟು 60 ಲಕ್ಷ 40 ಸಾವಿರ ರೂಗಳ ಚೆಕ್ ಹಾಗೂ ಪ್ರಮಾಣ ಪತ್ರ ವಿತರಣೆ*

ಪ್ರಗತಿವಾಹಿನಿ ಸುದ್ದಿ: ಜೊಲ್ಲೆ ಗ್ರೂಪ್ ವತಿಯಿಂದ JEE,NEET ವಿಧ್ಯಾರ್ಥಿಗಳಿಗೆ ಶಶಿಕಲಾ ಜೊಲ್ಲೆ ಶಿಷ್ಯವೇತನ ಪಡೆದ ಸುಮಾರು 20 ವಿದ್ಯಾರ್ಥಿಗಳಿಗೆ ಒಟ್ಟು 60 ಲಕ್ಷ 40 ಸಾವಿರ ರೂಗಳ ಚೆಕ್ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿಯ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿ ಪೂರ್ವ ವಿಜ್ಞಾನ ಕಾಲೇಜು ನಿಪ್ಪಾಣಿಯಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಓರಿಯೆಂಟೇಶನ್ ಹಾಗೂ ಸ್ವಾಗತ ಸಮಾರಂಭ ಜರುಗಿತು.
ರವಿವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ನಡೆದ ಸನ್ 2025-26 ನೇ ಸಾಲಿನ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ವಸತಿ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ನಿಪ್ಪಾಣಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಓರಿಯೆಂಟೇಶನ್ ಹಾಗೂ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮಾಜಿ ಉಪಕುಲಪತಿಗಳಾದ ಡಾ.ಎಸ್ ಜೆ ಗುಡಿಸಿ ಹಾಗೂ ಜೊಲ್ಲೆ ಗ್ರೂಪ್ ಉಪಾಧ್ಯಕ್ಷರಾದ ಶ್ರೀ ಬಸವಪ್ರಸಾದ ಜೊಲ್ಲೆ ಚಾಲನೆ ನೀಡಿದರು.
ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ಹೆಸರಾಂತ ಕಾಲೇಜುಗಳಿಗೆ ಭೇಟಿ ನೀಡಿ ವಿಭಿನ್ನ ಪ್ರಕಾರದ ಮೂಲಭೂತ ಸೌಕರ್ಯ ಹೊಂದಿದ ಉತ್ತರ ಕರ್ನಾಟಕದಲ್ಲಿಯೇ ಒಂದು ಮಾದರಿ ವಿದ್ಯಾ ಸಂಸ್ಥೆಯನ್ನಾಗಿಸುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ ಎಂದರು.
ಅದೇ ರೀತಿ ಅತಿಥಿಗಳಾಗಿ ಆಗಮಿಸಿದ ಡಾ.ಎಸ್ ಜೆ ಗುಡಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭಾವಿ ಭವಿಷ್ಯಕ್ಕಾಗಿ ಇಂತಹ ಮೂಲಭೂತ ಸೌಕರ್ಯಗಳುಳ್ಳ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಕರೆ ನೀಡಿದರು ಮಕ್ಕಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಜೊಲ್ಲೆ ಎಜ್ಯೂಕೇಶನ್ ಸೊಸಾಯಟಿ ಸದಾ ಕಾರ್ಯೋನ್ಮುಖವಾಗಿದೆ ಎಂದು ಪ್ರಶಂಸಿದರು.
ಸಂಸ್ಥೆಯು ಸಂಸ್ಥಾಪಕರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಸಂಸ್ಥೆ ಬೆಳವಣಿಗೆಯಲ್ಲಿ ಪಾಲಕರ ಸಲಹೆ ಸೂಚನೆಗಳು ಅಗತ್ಯ ಎಂದು ಮಾರ್ಗದರ್ಶಿಸಿದರು ಅದೇ ರೀತಿ ೧೦ನೇ ವರ್ಗದಲ್ಲಿ ಎಲ್ಲ ಪಾಲಕರು ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸುವರು ಆದರೆ ಅದೇ ಕಾಳಜಿ ಪಿಯುಸಿ ಹಂತದಲ್ಲಿ ಆಗದೆ ಇದ್ದಿದ್ದರಿಂದ ಇವತ್ತು ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳ ಪ್ರದರ್ಶನ ಕಳಪೆ ಮಟ್ಟದಲ್ಲಿ ಕಾಣುತ್ತಿದೆ. ಆದ್ದರಿಂದ ಪಿಯುಸಿ ಹಂತದಲ್ಲಿ ಪಾಲಕರಾದವರು ಮಕ್ಕಳ ಕುರಿತು ವಿಶೇಷ ಕಾಳಜಿ ವಹಿಸಿದ್ದೇ ಆದರೆ ಮಕ್ಕಳ ಜೀವನದಲ್ಲಿ ಈ ಹಂತವು ಬದಲಾವಣೆಯ ಬುನಾದಿಯಾಗಲಿದೆ ಎಂದು ಪಾಲಕರಿಗೆ ಸಲಹಿಸಿದರು. ಮಕ್ಕಳೇ ಪಿಯುಸಿ ಅನ್ನುವುದು ಒಂದು ಸುವರ್ಣ ಅವಕಾಶ ಇದನ್ನು ಅನುಭವಿಸಿ ಆನಂದಿಸಿ ಎಂದು ವಿದ್ಯಾರ್ಥಿಗಳನ್ನು ಅಭಿಪ್ರೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಿಪ್ಪಾಣಿಯ ಜನಪ್ರಿಯ ಶಾಸಕರಾದ ಶಶಿಕಲಾ ಜೊಲ್ಲೆ ಮಾತನಾಡಿ ನಮ್ಮ ಗ್ರಾಮೀಣ ಕ್ಷೇತ್ರದ ಪಾಲಕರು ಪಿ.ಯು.ಶಿಕ್ಷಣಕ್ಕಾಗಿಮಂಗಳೂರು,ಬೆಂಗಳೂರು,ಮೂಡಬಿದರೆ, ಬೇರೆ ಬೇರೆ ನಗರಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ ಅಲ್ಲಿನ ಹವಾವಾನ,ಊಟದ ಪದ್ಧತಿ,ಆಡುವ ಭಾಷೆ ನಮ್ಮ ಮಕ್ಕಳಿಗೆ ಆಗುವುದಿಲ್ಲ. ಈ ಉದ್ದೇಶದಿಂದ ಸಂಸ್ಕಾರದೊಂದಿಗೆ ಶಿಕ್ಷಣ ಎಂಬ ಧ್ಯೇಯದೊಂದಿಗೆ ಇಂದಿನ ಸ್ಪರ್ಧಾತ್ಮಕ ಯುಗದ ಮಹತ್ವವನ್ನು ಅರಿತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಯ ತಯಾರಿ ಜೊತೆಗೆ ಜೆಇಇ, ನೀಟ್, ಕೆ – ಸಿ,ಇ,ಟಿ ಯಂತಹ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಿ ಅವರ ಗುರಿ ಮುಟ್ಟಿಸುವ ಕಾರ್ಯಕ್ಕೆ ಜೊಲ್ಲೆ ಸಂಸ್ಥೆ ಬದ್ಧವಾಗಿದೆ.ಅಭ್ಯಾಸದೊಂದಿಗೆ ಯೋಗ, ಧ್ಯಾನ,ಗುರುಕುಲಪದ್ಧತಿ, ಭಾರತೀಯ ಸಂಸ್ಕೃತಿಯನ್ನು ಪ್ರೆರೇಪಿಸುವ ಚಟುವಟಿಕೆಗಳು ಈ ಸಂಸ್ಥೆಯ ವಿಶೇಷವಾಗಿವೆ.
ಇದೇ ವೇಳೆ ಶ್ರೀಮತಿ ಶಶಿಕಲಾ ಜೊಲ್ಲೆ ಶಿಷ್ಯವೇತನ ಪಡೆದ ಸುಮಾರು ೨೦ ವಿದ್ಯಾರ್ಥಿಗಳಿಗೆ ಒಟ್ಟು 60 ಲಕ್ಷ 40 ಸಾವಿರ ರೂಗಳ ಚೆಕ್ ಹಾಗೂ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಸಂಯೋಜಕರಾದ ಎಮ್ ಎಮ್ ಪಾಟೀಲ, ಪ್ರ‍್ರಾಚಾರ್ಯರಾದ ದೀಪಕ ಪಾಟೀಲ ಹಾಗೂ ಎಲ್ಲ ಅಂಗ ಸಂಸ್ಥೆಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ಇವೆಂಟ್ ಡೈರೆಕ್ಟರ್ ಆದ ವಿಜಯ ರಾವುತ ಸ್ವಾಗತಿಸಿದರು. ನೂಪುರ ಪಾಟೀಲ ಹಾಗೂ ಸಾರಾ ಪಾಟೀಲ ನಿರೂಪಿಸಿದರು.