Kannada NewsKarnataka NewsLatest

ಬೆಳಗಾವಿ ಜಿಲ್ಲೆಯಲ್ಲಿ ಶೇ.74.62ರಷ್ಟು ಮತದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗುರುವಾರ ಮೂರು ಮತಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸರಾಸರಿ 74.62ರಷ್ಟು ಮತ ಚಲಾವಣೆಯಾಗಿದೆ.

ಗೋಕಾಕದಲ್ಲಿ ಶೇ.73.08, ಅಥಣಿಯಲ್ಲಿ ಶೇ.75.23 ಹಾಗೂ ಕಾಗವಾಡದಲ್ಲಿ ಶೇ.75.91ರಷ್ಟು ಮತದಾನವಾಗಿದೆ.

ಅಥಣಿ-೨,೧೯,೮೩೧ ಮತದಾರರು; ಕಾಗವಾಡ ೧,೮೬,೧೯೦ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು ೨,೪೪,೩೧೩ ಮತದಾರರು ಇದ್ದಾರೆ.
ಜಿಲ್ಲೆಯ ಒಟ್ಟಾರೆ ೬,೫೦,೩೩೪ ಮತದಾರರ ಪೈಕಿ ೪,೮೫,೯೨೬ ಜನರು ತಮ್ಮ ಮತ ಚಲಾಯಿಸಿದ್ದರು.
ಕೆಲವೆಡೆ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿರುವುದನ್ನು ಹೊರತುಪಡಿಸಿ ಒಟ್ಟಾರೆ ಚುನಾವಣಾ ಪ್ರಕ್ರಿಯೆಯು ಸಂಪೂರ್ಣ ಶಾಂತಿಯುತವಾಗಿ ನಡೆಯಿತು.
ಮತದಾನ ಅಂತ್ಯಗೊಂಡ ಸಂಜೆ ಆರು ಗಂಟೆಯವರೆಗಿನ ಅವಧಿಯಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಶೇ.೭೩.೦೮ ರಷ್ಟು ಮತದಾನವಾಗಿತ್ತು. ಒಟ್ಟು ಮತದಾರರ ಪೈಕಿ ೧,೭೮,೫೫೪ ಜನರು ಮತದಾನ ಮಾಡಿದ್ದಾರೆ.
ಅದೇ ರೀತಿ ಅಥಣಿ ಮತಕ್ಷೇತ್ರದಲ್ಲಿ ಒಟ್ಟು ಶೇ.೭೫.೨೩ ಮತದಾನವಾಗಿದ್ದು, ೧,೬೫,೩೭೦ ಜನರು ಮತ ಚಲಾವಣೆ ಮಾಡಿದ್ದಾರೆ.
ಕಾಗವಾಡದಲ್ಲಿ ೧,೪೨,೦೦೨ (ಶೇ.೭೬.೨೭)ಜನರು ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.
ನಿಧಾನಗತಿಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು.
ಬೆಳಿಗ್ಗೆ ೯ ಗಂಟೆವರೆಗೆ ಜಿಲ್ಲೆಯ ಮೂರೂ ಮಕ್ಷೇತ್ರಗಳಲ್ಲಿ ಶೇ. 7.10 ಮತದಾನವಾಗಿತ್ತು.
ಈ ಅವಧಿಯಲ್ಲಿ ಅಥಣಿ ೮.೩೩; ಕಾಗವಾಡ ೬.೯೪ ಹಾಗೂ ಗೋಕಾಕ ಶೇ.೬.೧೧ ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಅದೇ ರೀತಿ ೧೧ ಗಂಟೆಯ ವೇಳೆಗೆ ಜಿಲ್ಲೆಯ ಒಟ್ಟು ಮತದಾನ ಪ್ರಮಾಣ ೨೧.೬೦ ರಷ್ಟಾಗಿತ್ತು.
ಅಥಣಿ ೨೩.೧೦; ಕಾಗವಾಡ ೨೧.೩೪ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಶೇ. ೨೦.೪೫ ಮತನದಾನ ನಡೆದಿತ್ತು.
ನಂತರದ ಎರಡು ಗಂಟೆಯ ಅವಧಿಯಲ್ಲಿ ಜಿಲ್ಲೆಯ ಒಟ್ಟಾರೆ ಮತದಾನ ಪ್ರಮಾಣ ೩೮.೬೬ ಆಗಿತ್ತು ಒಟ್ಟು ಮತದಾರರ ಪೈಕಿ ೨,೫೧,೪೧೧ ಜನರು ತಮ್ಮ ಹಕ್ಕು ಚಲಾಯಿಸಿದ್ದರು.
ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲೆಯ ಮೂರೂ ಮತಕ್ಷೇತ್ರಗಳ ಒಟ್ಟಾರೆ ಮತದಾನ ಪ್ರಮಾಣವು ಶೇ.೫೩.೬೯ ತಲುಪಿತು. ಒಟ್ಟು ಮತದಾರರ ಪೈಕಿ ೩,೪೯,೧೫೬ ಮತಗಳು ಚಲಾವಣೆಗೊಂಡಿದ್ದವು.
ಈ ವೇಳೆಗೆ ಅಥಣಿ ಶೇ.೫೬.೦೫; ಕಾಗವಾಡ ಶೇ. ೫೧.೪೧ ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ಶೇ.೫೩.೩೦ ಮತದಾನವಾಗಿತ್ತು.
ಸಂಜೆ ಐದು ಗಂಟೆಯವರೆಗೆ ಜಿಲ್ಲೆಯ ಒಟ್ಟಾರೆ ಮತದಾನವು ಶೇ. ೬೮.೯೨ ರಷ್ಟಾಗಿದೆ.
ಅಥಣಿಯಲ್ಲಿ ೧,೫೫,೪೯೨ (ಶೇ.೭೦.೭೩); ಕಾಗವಾಡ ೧,೨೯,೮೮೦(ಶೇ.೬೯.೭೬) ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ೧,೬೨,೮೧೦(ಶೇ.೬೨.೬೪) ಜನರು ತಮ್ಮ ಮತವನ್ನು ಚಲಾಯಿಸಿದ್ದರು.
ಬೆಳಿಗ್ಗೆ ೭ ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯು ಸಂಜೆ ೬ ಗಂಟೆಯವರೆಗೆ ನಡೆಯಿತು. ಮತದಾನ ಕೊನೆಗೊಳ್ಳುವ ೬ ಗಂಟೆಯ ವೇಳೆಗೆ ಮತಗಟ್ಟೆ ಆವರಣದಲ್ಲಿ ಹಾಜರಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು

 

ಜಿಲ್ಲೆಯ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ನಡೆದಿಲ್ಲ. ಗೋಕಾಕ ಕ್ಷೇತ್ರದಲ್ಲಿ ಕ್ಷೇತ್ರದವರಲ್ಲದ ಕೆಲವರು ಬಂದು ಗೊಂದಲ ಉಂಟು ಮಾಡಿದರು. ಅವರನ್ನೆಲ್ಲ ಹೊರಗೆ ಕಳುಹಿಸಲಾಯಿತು ಎಂದು ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಒಂದು ಮತಗಟ್ಟೆಯಲ್ಲಿ ಕುಡಿದು ಬಂದಿದ್ದ ಮತಗಟ್ಟೆ ಅಧಿಕಾರಿಯಿಂದಾಗಿ ಗೊಂದಲ ಉಂಟಾಯಿತು. ನಂತರ ಆತನನ್ನು ಅಮಾನತುಗೊಳಿಸಿ ಬೇರೆ ಅಧಿಕಾರಿ ನಿಯೋಜಿಸಲಾಯಿತು.

ಕುಡಿದು ಬಂದಾ, ತಪಾಸಣೆ ಮಾಡುವಾಗ ಓಡಿ ಹೋದಾ: ಮತಗಟ್ಟೆ ಅಧಿಕಾರಿ ಶಿಕ್ಷಕ ಅಮಾನತು

ಡಿ.ಕೆ.ಶಿವಕುಮಾರ ನನ್ನ ಮಿತ್ರ ನಂಬರ್ 1 -ರಮೇಶ್ ಜಾರಕಿಹೊಳಿ ಅಚ್ಛರಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button