*ಬೆಳಗಾವಿಯಲ್ಲಿ ಘೋರ ಘಟನೆ: ಕುಡುಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ನೀನು ಸತ್ತರೆ ಅಕ್ಕ ಚನ್ನಾಗಿ ಇರ್ತಾಳೆ ಎಂದು ಬಾಮೈದ ಬೈದಿದ್ದಕ್ಕೆ ವ್ಯಕ್ತಿಯೊಬ್ಬ ಪತ್ನಿ ಹಾಗೂ ಬಾಮೈದನ ಎದುರೇ ಕುಡುಗೋಲಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಲ್ಲಪ್ಪ ಮೃತ ವ್ಯಕ್ತಿ. ಪತ್ನಿ ರೇಖಾ ಹಾಗೂ ಬಾಮೈದನ ಜೊತೆ ಕಿರಿಕ್ ಮಾಡಿಕೊಂಡಿದ್ದ ಮಲ್ಲಪ್ಪ ಕುಡಿದ ಮತ್ತಿನಲ್ಲಿ ಕುಡುಗೋಲಿನಿಂದ ತನ್ನ ಕತ್ತು ಕೊಯ್ದುಕೊಂಡು ಸಾವನ್ನಪ್ಪಿದ್ದಾನೆ.
ಮಲ್ಲಪ್ಪನ ಕುಡಿತದ ಚಟಕ್ಕೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಸಾಲದ್ದಕ್ಕೆ ಪತ್ನಿಗೂ ಹಿಂಸಿಸುತ್ತಿದ್ದ. ನಿನ್ನೆ ಮನೆಯಲ್ಲಿದ್ದ ಅಕ್ಕಿ ಮಾರಿ ಕುಡಿದು ಬಂದಿದ್ದ. ಇದರಿಂದ ಪತ್ನಿ ಗಲಾಟೆ ಮಾಡಿದ್ದಾಳೆ. ಪತಿ-ಪತ್ನಿ ನಡುವೆ ಜಗಳ ಆರಂಭವಾಗಿದೆ. ಇದೇ ವೇಳೆ ಆಗಮಿಸಿದ ಬಾಮೈದ ಮಲ್ಲಿಕಾರ್ಜುನ, ಭಾವನ ಹುಚ್ಚಾಟಕ್ಕೆ ಬೈದಿದ್ದಾನೆ. ಅಲ್ಲದೇ ನೀತು ಸತ್ತರೆ ನನ್ನ ಅಕ್ಕ ಚನ್ನಾಗಿ ಇರ್ತಾಳೆ ಎಂದು ಕಿಡಿಕಾರಿದ್ದಾನೆ. ಬಾಮೈದ ಬೈದಿದ್ದಕ್ಕೆ ಕುಡುಗೋಲಿನಿಂದ ಏಕಾಏಕಿ ತನ್ನ ಕತ್ತು ಕೊಯ್ದುಕೊಂಡ ಮಲ್ಲಪ್ಪ, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪತ್ನಿ ರೇಖಾ ಹಾಗೂ ಬಾಮೈದ ಮಲ್ಲಿಕಾರ್ಜುನ ವಿರುದ್ಧ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಮಲ್ಲಿಕಾರ್ಜುನ ನಾಪತ್ತೆಯಾಗಿದ್ದಾನೆ.