
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಕಂಪನಿಯ ಕೇಬಲ್ ಕಳ್ಳತನ ಮಾಡಿ ಕದ್ದೊಯ್ಯುತ್ತಿದ್ದ ವೇಳೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 120/2025 ಕಲಂ 331(3), 331(4), 305(ಎ) ಬಿಎನ್‌ಎಸ್-2023 ಅಡಿ ಪ್ರಕರಣ ದಾಖಲಾಗಿದೆ.
ತಾಮ್ರದ ವೈರ್ ಗಳನ್ನು ಕದ್ದೊಯ್ಯುವಾಗ ಗ್ರಾಮೀಣ ಠಾಣೆ ಪೊಲೀಸರು ಪೀರನವಾಡಿ ನಾಕಾದಲ್ಲಿ ತಪಾಸಣೆ ಮಾಡುವಾಗ ಆರೋಪಿಗಳು ಸಿಕ್ಕಿಬಿದಿದ್ದಾರೆ.
ಈ ಪ್ರಕರಣದಲ್ಲಿ ಚಾಲಕ ಸೇರಿ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ. ರಮೇಶ @ ರಾಮು, ಸಂತೋಷ @ ಬಲ್ಯಾ, ಲಗಮಪ್ಪ ಬಸಪ್ಪ ಯರಗಾಣೆ, ಸೋಮಯ್ಯಾ ಅಡವಯ್ಯಾ ಹಿರೇಮಠ, ಪ್ರಜ್ವಲ ವೀರುಪಾಕ್ಷಿ ಕಂಬಿ ಎಂಬುವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು 1ಲಕ್ಷ ಮೌಲ್ಯದ ಜಿ.ಎಮ್ ಕಂಪನಿಯ 75 ವಾಯರ್ ಬಂಡಲ್ ಮತ್ತು ಪಿನೊಲೆಕ್ಸ್ ಕಂಪನಿಯ 15 ಕೇಬಲ್ ಬಂಡಲ್ ವಶಕ್ಕೆ ಪಡೆಯಲಾಗಿದೆ. 2,80,000/ ಮೌಲ್ಯದ ಆಟೋ, ಒಂದು ಮೆಟಲ್ ಶೀಟ್ ಕತ್ತರಿ ಹೀಗೆ ಒಟ್ಟು 3,80,000 ರೂ. ಮೌಲ್ಯಸ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ/ಪಿಎಸ್‌ಐ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.