*ಡಾ. ಪ್ರಭಾಕರ ಕೋರೆ ಜನ್ಮದಿನದ ನಿಮಿತ್ತ ಬೃಹತ್ ಆರೋಗ್ಯ ತಪಾಸಣಾ ಶಿಬಿರ* *ನೋಂದಣಿ ಉಚಿತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರ 78 ನೇ ಜನ್ಮದಿನದ ನಿಮಿತ್ತವಾಗಿ ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಆಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ನೊಂದಣಿ ಉಚಿತವಾಗಿದೆ. ಅದರ ಜೊತೆಗೆ ಮಧುಮೇಹ ತಪಾಸಣೆ, ಉಸಿರಾಟ ತಪಾಸಣೆ(ಸ್ಪೈರೊಮೆಟ್ರಿ), ಇ ಸಿ ಜಿ ತಪಾಸಣೆ, ಎಲುಬಿನ ಸಾಂದ್ರತೆ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು. ಹಾಗೆಯೇ ಆಯ್ದ ಮಹಿಳಾ ರೋಗಿಗಳಿಗೆ ಉಚಿತ ಗರ್ಭಾಶಯ ಕ್ಯಾನ್ಸರ್ ತಪಾಸಣೆಯನ್ನು ಮಾಡಲಾಗುವುದು ಮತ್ತು ಇನ್ನಿತರೆ ತಪಾಸಣೆಗಳ ಮೇಲೆ ಶೇಕಡಾ. 20 ರಷ್ಟು ರಿಯಾಯತಿ ಇದೆ.
ಈ ದಿನದ ವಿಶೇಷವೆಂಬಂತೆ ಸುತ್ತಮುತ್ತಲ ಆಯ್ದ 14 ಗ್ರಾಮ ಪಂಚಾಯತಿಗಳಾದ ದೇಸೂರ, ಬಡಾಲ ಅಂಕಲಗಿ, ಭೆಂಡಿಗೇರಿ, ಕೆ ಕೆ ಕೊಪ್ಪ, ನಿಟ್ಟೂರ, ಸಂತಿಬಸ್ತವಾಡ ಬೈಲೂರು, ಗರ್ಲಗುಂಜಿ, ನಂದಿಹಳ್ಳಿ, ತೊಪಿನಕಟ್ಟಿ, ಬರಗಾವ, ಬಸ್ತವಾಡ ಹಾಗೂ ಮಂಡೊಳ್ಳಿ ವ್ಯಾಪ್ತಿಯಲ್ಲಿ ಬರುವ 21 ಹಳ್ಳಿಗಳ ಜನರ ಆರೋಗ್ಯವನ್ನು ಕಾಪಾಡುವ ಹಾಗೂ ಸರಳ ಸೇವೆ ಲಭ್ಯವಾಗುವಂತೆ ಮಾಡುವ ಯೋಜನೆ ಇದಾಗಿದೆ.
ಈ ಹಳ್ಳಿಗಳಿಂದ ಬರುವ ರೋಗಿಗಳಿಗೆ ನೋಂದಣಿ ಉಚಿತವಾಗಿರುತ್ತದೆ ಹಾಗೂ ಈ ಹಳ್ಳಿಗಳಿಂದ ಬರುವ ರೋಗಿಗಳಿಗೆ ವಿಶೇಷ ಕಾಳಜಿಯ ಜೊತೆಗೆ ವೈದ್ಯರೊಂದಿಗೆ ಉಚಿತ ಸಂದರ್ಶನ, ತಪಾಸಣೆಗಳ ಮೇಲೆ ವಿಶೇಷ ರಿಯಾಯತಿಗಳನ್ನು ನೀಡಲಾಗುವದು.
ಆದ್ದರಿಂದ ಬೆಳಗಾವಿ ನಗರದ ನಾಗರಿಕರು ಹಾಗೂ ಸುತಮುತ್ತಲ ಹಳ್ಳಿಗಳ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8550887777, 9538701437 ಹಾಗೂ 9071413821 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ.