Karnataka NewsLatest

*BREAKING: ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 6ನೇ ಪಾಯಿಂಟ್ ಸ್ಥಳದಲ್ಲಿ ಮೂಳೆಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ಆಸುಪಾಸಿನಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರುದಾರ ತೋರಿರುವ ೬ನೇ ಪಾಯಿಂಟ್ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಎಸ್ ಐಟಿ ರಚನೆ ಮಾಡಿದ್ದು, ಪ್ರಣವ್ ಮೊಹಂತಿ ನೇತೃತ್ವದ ಎಸ್ ಐಟಿ ತಂಡದಿಂದ ತನಿಖೆ ಚುರುಕುಗೊಂಡಿದೆ. ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಮಣ್ಣು ಅಗೆದು ಶೋಧಕಾರ್ಯ ನಡೆಸಲಾಗುತ್ತಿದೆ. ದೂರುದಾರ ಒಟ್ಟು 13 ಸ್ಥಳಗಳಲ್ಲಿ ಶವ ಹೂತಿಟ್ಟಿರುವ ಬಗ್ಗೆ ತಿಳಿಸಿದ್ದು, ಅದರಲ್ಲಿ ಇದೀಗ 6ನೇ ಪಾಯಿಂಟ್ ಸ್ಥಳದಲ್ಲಿ ಮೂಳೆಗಳು ಪತ್ತೆಯಾಗಿವೆ.

ಕಳೆದ ಮೂರು ದಿನಗಳಿಂದ ಎಸ್ ಐಟಿ ತಂಡ ದೂರುದಾರನನ್ನು ಸ್ಥಳಕ್ಕೆ ಕರೆದೊಯ್ದು ನೇತ್ರಾವತಿ ನದಿ ದಡದ ಆಸುಪಾಸಿನಲ್ಲಿ ಭೂಮಿಯನ್ನು ಅಗೆದು ಅಸ್ಥಿಪಂಜರದ ಪತ್ತೆಗಾಗಿ ಶೋಧ ನಡೆಸಿದ್ದು, ಈವರೆಗೆ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಐದು ಸ್ಥಳಗಳಲ್ಲಿ ಯಾವುದೇ ಮೂಳೆಗಳು ಪತ್ತೆಯಾಗಿಲ್ಲ. ಇಂದು 6ನೇ ಸ್ಥಳದಲ್ಲಿ ಶೋಧಕಾರ್ಯ ನಡೆದಿದ್ದು, ಮಣ್ಣು ಅಗೆದಾಗ ಮೂಳೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಮೂಳೆಗಳನ್ನು ವಶಕ್ಕೆ ಪಡೆದು, ಅಕ್ಕಪಕ್ಕದ ಜಾಗದಲ್ಲಿಯೂ ಮಣ್ಣು ಅಗೆದು ಶೋಧ ನಡೆಸಲು ಮುಂದಾಗಿದ್ದಾರೆ.

6ನೇ ಪಾಯಿಂಟ್ ಸ್ಥಳದಲ್ಲಿ ತಾನು 8 ಶವಗಳನ್ನು ಹೂತಿಟ್ಟಿದ್ದಾಗಿ ದೂರುದಾರ ಎಸ್ ಐಟಿಗೆ ತಿಳಿಸಿದ್ದು, ಇದೀಗ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳದ ಸುತ್ತಮುತ್ತಲೂ ವಿಸ್ತಾರವಾಗಿ ಮಣ್ಣು ಅಗೆದು ಶೋಧಕಾರ್ಯ ನಡೆಸಲಾಗುತ್ತಿದೆ.

Home add -Advt

Related Articles

Back to top button