Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಡೆವಲಪ್ ಮೆಂಟ್ ಪ್ಯಾನೆಲ್ ನಿಂದಾಗಿ ವಾಣಿಜ್ಯೋದ್ಯಮ ಸಂಘಕ್ಕೆ ಹೊಸ ರೂಪ :  ಚೈತನ್ಯ ಕುಲಕರ್ಣಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  9 ವರ್ಷದ ಹಿಂದೆ ಹುಟ್ಟಿಕೊಂಡ ಬೆಳಗಾವಿ ಡೆವಲ್ ಪೆಂಟ್ ಪ್ಯಾನೆಲ್ ನಿಂದಾಗಿ ಬೆಳಗಾವಿ ವಾಣಿಜ್ಯೋದ್ಯಮ ಸಂಘದ (ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್) ಕಾರ್ಯವೈಖರಿ ಸಮಾಜಮುಖಿಯಾಗಿ ಬದಲಾಗಿದೆ ಎಂದು ಪ್ಯಾನೆಲ್ ಸಂಸ್ಥಾಪಕರಲ್ಲೊಬ್ಬರಾಗಿರುವ, ಉದ್ಯಮಿ ಚೈತನ್ಯ ಕುಲಕರ್ಣಿ ಹೇಳಿದ್ದಾರೆ.

ಗುರುವಾರ ಸಂಜೆ ನಡೆದ ಡೆವಲಪ್ ಮೆಂಟ್ ಪ್ಯಾನೆಲ್ ನ ವಿಶೇಷ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಹಿಂದೆಲ್ಲೆ ವಾಣಿಜ್ಯೋದ್ಯಮ ಸಂಘ ಕ್ರಿಯಾಶೀಲವಾಗಿರಲಿಲ್ಲ, ವಾಣಿಜ್ಯೋದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿರಲಿಲ್ಲ ಎನ್ನುವ ಆರೋಪವಿತ್ತು. ನಂತರದಲ್ಲಿ ನಾನು, ಸಚಿನ್ ಸಬ್ನಿಸ್, ಸುನೀಲ್ ನಾಯ್ಕ ಚರ್ಚಿಸಿ, ಸಮಾನ ಮನಸ್ಕರನ್ನೆಲ್ಲ ಸೇರಿಸಿ ಬೆಳಗಾವಿ ಡೆವಲಪ್ ಮೆಂಟ್ ಪ್ಯಾನೆಲ್ ರಚಿಸಲಾಯಿತು. ಇಂದು ಸಂಪೂರ್ಣ ಆಡಳಿತ ಪ್ಯಾನೆಲ್ ಹಿಡಿತಕ್ಕೆ ಬಂದಿದೆ. ಜೊತೆಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಾರ್ಥರಹಿತವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಬೆಳೆಯುತ್ತಿರುವ ಬೆಳಗಾವಿಯಲ್ಲಿ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಚೆಂಬರ್ ಆಫ್ ಕಾಮರ್ಸ್ ಜವಾಬ್ದಾರಿ ಬಹಳಷ್ಟಿದೆ. ಸಮಾಜಕ್ಕೆ, ನಗರದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಬೇಕಾಗಿದೆ. ಹಾಗಾಗಿ ಎಲ್ಲ ಸದಸ್ಯರೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಚೆಂಬರ್ ಆಫ್ ಕಾಮರ್ಸ್ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಬೆಳೆಯಬೇಕು. ಸರಕಾರದೊಂದಿಗೆ ಕೈ ಜೋಡಿಸಿ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ಚೈತನ್ಯ ಕುಲಕರ್ಣಿ ಹೇಳಿದರು.

ಲಘು ಉದ್ಯೋಗ ಭಾರತಿಯ ಅಧ್ಯಕ್ಷರೂ ಆಗಿರುವ, ಚೆಂಬರ್ ಆಫ್ ಕಾಮರ್ಸ್ ಆಡಳಿತ ಮಂಡಳಿ ಸದಸ್ಯ ಸಚಿನ್ ಸಬ್ನಿಸ್ ಮಾತನಾಡಿ, ಡೆವಲಪ್ ಮೆಂಟ್ ಪ್ಯಾನೆಲ್ ರಚನೆಯಾದಾಗಿನಿಂದ ಚೆಂಬರ್ ಆಫ್ ಕಾಮರ್ಸ್ ಆಡಳಿತದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದೆ ಜನಪ್ರತಿನಿಧಿಗಳಲ್ಲಿ, ಉದ್ಯಮಿಗಳಲ್ಲಿ ಚೆಂಬರ್ ಕುರಿತು ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಈಗ ಎಲ್ಲರೂ ಸ್ವಾರ್ಥ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಎಲ್ಲರೂ ಒಟ್ಟಾಗಿ ಸಮಾಜಕ್ಕೋಸ್ಕರ, ನಗರಕ್ಕೋಸ್ಕರ್ ಕೆಲಸ ಮಾಡಬೇಕು. ಚೆಂಬರ್ ಕೆಲಸಕ್ಕೆ ಸಮಯ ಕೊಡಲು ಸಾಧ್ಯವಿಲ್ಲದವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿದರು.

Home add -Advt

ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಭಾಕರ ನಾಗರಮುನ್ನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಉಪಾಧ್ಯಕ್ಷರಾದ ಸ್ವಪ್ನಿಲ್ ಶಹಾ, ಉದಯ ಜೋಶಿ, ಖಜಾಂಚಿ ಸಂಜಯ ಪೋತದಾರ, ಮಾಜಿ ಅಧ್ಯಕ್ಷರುಗಳಾದ ರೋಹನ್ ಜುವಳಿ, ಶ್ರೀಧರ ಉಪ್ಪಿನ್, ಸಂಜೀವ ಕತ್ತಿಶೆಟ್ಟಿ, ಸಿ.ಸಿ. ಹೊಂಡದಕಟ್ಟಿ, ಮಾಜಿ ಕಾರ್ಯದರ್ಶಿ ರಾಜೇಂದ್ರ ಮುತಗೇಕರ್, ಸದಸ್ಯರುಗಳಾದ ವಿಕ್ರಂ ಜೈನ್, ಸುನೀಲ್ ನಾಯ್ಕ್, ಸಂದೀಪ ಬಾಗೇವಾಡಿ, ಅಪ್ಪಾ ಗುರವ್, ಆನಂದ ದೇಸಾಯಿ ಮೊದಲಾದವರು ಮಾತನಾಡಿ, ಡೆವಲಪ್ ಮೆಂಟ್ ಪ್ಯಾನೆಲ್ ನಿಂದಾಗಿ ಚೆಂಬರ್ ಆಫ್ ಕಾಮರ್ಸ್ ನಲ್ಲಿ ಬದಲಾವಣೆ ಬಂದಿದೆ. ಈ ಪ್ಯಾನೆಲ್ ಮುಂದುವರಿಸಬೇಕು. ಸಂಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಇಲಾಖೆಯಿಂದ ವಾಣಿಜ್ಯೋದ್ಯಮಿಗಳಿಗೆ ಕಿರುಕುಳವಾದರೆ ಸ್ಪಂದಿಸಬೇಕು, ನಗರದ ರಸ್ತೆ, ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಒತ್ತಡ ಹೇರಬೇಕು ಎಂದು ಹೇಳಿದರು. 

ಕೀತ್ ಮಚಾಡೋ, ರಾಜೇಶ್ ಮುಚ್ಚಂಡಿಕರ್, ವಿನೀತ್ ಹರಕುಣಿ, ರೋಹಿತ್ ಕಪಾಡಿಯಾ, ರಮೇಶ ಲಡ್ಡದ್, ಸಚಿನ್ ಹಂಗಿರಗೇಕರ್, ಮನೋಜ್ ಮತ್ತಿಕೊಪ್, ಸತೀಶ್ ಚೌಗುಲಾ, ಎಂ.ಕೆ.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. 

 ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಪ್ಯಾನಲ್ ಸಭೆಗಳನ್ನು ನಡೆಸಬೇಕು, ಆಡಳಿತ ಮಂಡಳಿ ಸದಸ್ಯರು ಚೆಂಬರ್ ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ಸಕ್ರಿಯವಲ್ಲದ ಸದಸ್ಯರು ಸಕ್ರಿಯ ಸದಸ್ಯರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ನಾಮನಿರ್ದೇಶನ ನೀಡುವ ಮೊದಲು ಸದಸ್ಯರನ್ನು ಆಹ್ವಾನಿತರನ್ನಾಗಿ ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು.

Related Articles

Back to top button