Kannada NewsKarnataka NewsLatest

BREAKING: ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಪತ್ತೆಯಾಯ್ತು ಶವದ ತುಂಡುಗಳು: ಬೆಚ್ಚಿಬಿದ್ದ ಜನರು

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ನೀಡಿರುವ ಮಾಹಿತಿ ಬೆನ್ನಲ್ಲೇ ಎಸ್ ಐಟಿ ತನಿಖೆ ಚುರುಗೊಂಡಿದೆ. ಈ ನಡುವೆ ತುಮಕೂರಿನಲ್ಲಿ ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆಯಾಗಿರುವ ಘಟನೆ ನಡೆದಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಐದು ಕಡೆ ಮೃತದೇಹದ ತುಂಡುಗಳು ಪತ್ತೆಯಾಗಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲದ ಮುತ್ಯಾಲಮ್ಮ ದೇವಾಲಯದ ಬಳಿಯಿರುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.

3 ಕಿ.ಮೀ ವ್ಯಾಪ್ತಿಯಲ್ಲಿ ಐದು ಕಡೆಗಳಲ್ಲಿ ಕವರ್ ನಲ್ಲಿ ಶವದ ತುಂಡುಗಳು ಪತ್ತೆಯಾಗಿವೆ. ಮೃತದೇಹದ ತುಂಡುಗಳು ಪುರುಷನದ್ದೋ? ಮಹಿಳೆಯದ್ದೋ? ಎಂಬ ಗೊಂದಲವಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಕೆ.ವಿ.ಅಶೋಕ್ ಭೇಟಿ ನೀಡಿದ್ದಾರೆ.

Home add -Advt

Related Articles

Back to top button