
ಪ್ರಗತಿವಾಹಿನಿ ಸುದ್ದಿ: ಕೆ.ಎನ್ ರಾಜಣ್ಣ ರಾಜೀನಾಮೆ ಕೊಟ್ಟಿಲ್ಲ, ಸಚಿವ ಸಂಪುಟದಿಂದ ಅವರನ್ನು ವಜಾ ಮಾಡಲಾಗಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಹೈಕಮಾಂಡ್ ಸೂಚನೆ ಮೇರೆಗೆ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಅವರನ್ನು ವಜಾಗೊಳಿಸಲಾಗಿದೆ ಈ ಬಗ್ಗೆ ಈಗಾಗಲೇ ಅಧಿಕೃತವಾಗಿ ಆದೇಶ ಪ್ರಕಟವಾಗಿದೆ ಎಂದರು.
ರಾಜಣ್ಣ ಸಪ್ಟೆಂಬರ್ ನಲ್ಲಿ ಕ್ರಾಂತಿ ಆಗಲಿದೆ ಎಂದು ಹೇಳುತ್ತಿದ್ದರು. ಈಗಲೇ ಕ್ರಾಂತಿಯಾಗಿದೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.