Kannada NewsKarnataka NewsLatest
*ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್: 13ನೇ ಪಾಯಿಂಟ್ ನಲ್ಲಿ ಅಗೆದರೂ ಸಿಗದ ಅಸ್ಥಿಪಂಜರ*

ಮಂಗಳೂರು: ಧರ್ಮಸ್ಥಳದದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಮಹತ್ವದ ಸ್ಥಳ ದೂರುದಾರ ತೋರಿಸಿದ್ದ 13ನೇ ಸ್ಥಳದಲ್ಲಿ ಎಸ್ ಐಟಿ ತಂಡ ಶೋಧಕಾರ್ಯ ಮುಕ್ತಾಯಗೊಳಿಸಿದೆ.
ಕಲೆದ ಎರಡು ದಿನಗಳಿಂದ ನೇತ್ರಾವತಿ ನದಿ ದಡದಲ್ಲಿ 13ನೇ ಪಾಯಿಂಟ್ ನಲ್ಲಿ ಎಸ್ ಐಟಿ ಅಧಿಕಾರಿಗಳು ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ಶೋಧ ನಡೆಸಿದ್ದರು. ಸುಮಾರು 18 ಅಡಿ ಆಳ ಹಾಗೂ 32 ಅಡಿ ಉದ್ದ ಮಣ್ಣನ್ನು ಅಗೆದರೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದೆ.
ಈ ನಡುವೆ ದೂರುದಾರ ತಾನು ಇನ್ನಷ್ಟು ಹೊಸ ಸ್ಥಳಗಳನ್ನು ತೋರಿಸುವುದಾಗಿ ಹೇಳಿಕೆ ನೀಡಿದ್ದು, ಎಸ್ ಐಟಿ ಅಧಿಕಾರಿಗಳ ಮುಂದಿನ ನಡೆ ಕಾದು ನೋಡಬೇಕಿದೆ.