ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಹೊಂದಿರುವ ಖಾತೆಗಳ ಪರಿಷ್ಕೃತ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸಲ್ಲಿಸಿದ್ದಾರೆ.
ಇದರ ಪ್ರಕಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಬಳಿ ಬೆಂಗಳೂರು ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾನವಹಕ್ಕುಗಳು, ಐಟಿ ಬಿಟಿ, ವಿಜ್ಞಾನ- ತಂತ್ರಜ್ಞಾನ ಖಾತೆಗಳು ಇರಲಿವೆ.
ಎಂ.ಬಿ.ಪಾಟೀಲ ಗೃಹ ಇಲಾಖೆ ನಿಭಾಯಿಸುವರು. ಡಿ.ಕೆ.ಶಿವಕುಮಾರ ಜಲಸಂಪನ್ಮೂಲ, ಕನ್ನಡ-ಸಂಸ್ಕೃತಿ ಇಲಾಖೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊಣೆ ಹೊರಲಿದ್ದಾರೆ. ಆರ್.ವಿ.ದೇಶಪಾಂಡೆ ಕಂದಾಯ ಇಲಾಖೆ, ಕೆ.ಜೆ.ಜಾರ್ಜ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷ್ಣ ಭೈರೇಗೌಡ ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನಿಭಾಯಿಸುವರು.
ಯು.ಟಿ.ಖಾದರ ನಗರಾಭಿವೃದ್ಧಿ ಇಲಾಖೆ (ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊರತುಪಡಿಸಿ), ಕೆಯುಡಬ್ಲುಎಸ್, ಕೆಯುಐಡಿಎಫ್ ಸಿ, ಜಯಮಾಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಡಿಕೊಳ್ಳುವರು.
ಸತೀಶ ಜಾರಕಿಹೊಳಿ ಅರಣ್ಯ ಮತ್ತು ಪರಿಸರ, ಸಿ.ಎಸ್.ಶಿವಳ್ಳಿ ಪೌರಾಡಳಿತ, ಎಂ.ಟಿ.ಬಿ.ನಾಗರಾಜು ವಸತಿ, ಇ.ತುಕಾರಾಂ ವೈದ್ಯಕೀಯ ಶಿಕ್ಷಣ, ಎನ್.ಎಚ್.ಶಿವಶಂಕರ ರಡ್ಡಿ ಕೃಷಿ, ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ, ಜಮೀರ್ ಅಹಮದ್ ಖಾನ್ ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ ಬೋರ್ಡ್, ಶಿವಾನಂದ ಪಾಟೀಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆಂಕಟರಮಣಪ್ಪ ಕಾರ್ಮಿಕ, ರಾಜಶೇಖರ ಪಾಟೀಲ ಗಣಿ ಮತ್ತು ಭೂವಿಜ್ಞಾನ, ಸಿ.ಪುಟ್ಟರಂಗ ಶೆಟ್ಟಿ ಹಿಂದುಳಿದ ಮತ್ತು ಅಲ್ುಸಂಖ್ಯಾತ ಇಲಾಖೆ, ಪಿ.ಟಿ.ಪರಮೇಶ್ವರ ನಾಯ್ಕ ಮುಜರಾಯಿ, ಕೌಶಲ್ಯಾಭಿವೃದ್ಧಿ, ರಹೀಂ ಖಾನ್ ಯುವಜನಸೇವೆ ಮತ್ತು ಕ್ರೀಡೆ, ಆರ್.ಬಿ.ತಿಮ್ಮಾಪುರ ಬಂದರು, ಒಳನಾಡು ಸಾರಿಗೆ ಮತ್ತು ಸಕ್ಕರೆ ಇಲಾಖೆಗಳನ್ನು ಹೊಂದಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ