*ಎಷ್ಟೆ ದೊಡ್ಡವರಾದರು ದೈವಕ್ಕಿಂತ ಯಾರೂ ದೊಡ್ಡವರಲ್ಲ: ಶಾಸಕ ರಮೇಶ ಜಾರಕಿಹೋಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮ ದೇವತೆಯ ಜಾತ್ರೆಯ ಬಗ್ಗೆ ಗೊಂದಲ ಉಂಟಾಗಿ ಮೂರು ಬಾರಿ ಸಭೆ ಕರೆದರು ಸಹ ಜಾತ್ರೆಯಲ್ಲಿ ಹೊನ್ನಾಟ ಮತ್ತು ರಥೋತ್ಸವದ ಬಗ್ಗೆ ಹಲವು ಸ್ಥಳಿಯರು ಒಪ್ಪದೆ ಒಮ್ಮತ ಸಿಗದೆ ಗೊಂದಲಕ್ಕಿಡಾಗಿತ್ತು. ಅದರ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಸರ್ವ ಸಮಾಜದ ಸಭೆ ನಡೆಸಲಾಯಿತು.
ಮುಂಬರುವ ಗ್ರಾಮದೇವತೆಯ ಜಾತ್ರೆ ನಿಮಿತ್ಯ ಮರಡಿಮಠದ ಶ್ರೀ ಪವಾಡೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಗೋಕಾಕ್ ಶಾಸಕ ರಮೇಶ ಜಾರಕಿಹೋಳಿಯವರು ಕೊಣ್ಣೂರಿನ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜಾತ್ರಾ ದಿನಾಂಕ ಮತ್ತು ಪತ್ರಿಕಾ ಬಿಡುಗಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಸ್ಥಳಿಯ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಶಾಸಕ ರಮೇಶ ಜಾರಕಿಹೋಳಿಯವರು ಮಾತನಾಡಿ ಗೋಕಾಕ್ ಜಾತ್ರೆಯಂತೆ ಕೊಣ್ಣೂರ ಗ್ರಾಮದೇವತೆ ಜಾತ್ರೆ ಶಾಂತಿ ರೀತಿಯಲ್ಲಿ ಭಕ್ತಿಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಹಿರಿಯರ ಜೊತೆ ಚರ್ಚಿಸಿ ಅವರ ಮಾರ್ಗದರ್ಶನದಲ್ಲಿ ನಡೆಸಬೇಕೆಂದರು.
ಇನ್ನು ಗೋಕಾಕ್ ಜಾತ್ರೆ ನಮ್ಮಿಂದಲೆ ಆಗಿದೆ ಅಂದರೆ ತಪ್ಪು. ಯಾರು ಎಷ್ಟೆ ದೊಡ್ಡವರಾಗಿದ್ದರು ದೈವಕ್ಕಿಂತ ಯಾರು ದೊಡ್ಡವರಲ್ಲ ನಾನು ಜಾತ್ರಾ ಕಮೀಟಿಯ ಸದಸ್ಯನಷ್ಟೆ, ಗೋಕಾಕ್ ಜಾತ್ರೆ ಆಗಿದ್ದು ಎಲ್ಲರೂ ಕೈ ಜೋಡಿಸಿ ಸಹಕಾರ ನೀಡಿದ್ದರಿಂದ ಅದ್ದೂರಿಯಾಗಿ ಜರುಗಿತು. ಅದಕ್ಕಾಗಿ ತಾವುಗಳು ಎಲ್ಲರೂ ಒಟ್ಟಾಗಿ ಎಲ್ಲ ಸಮಾಜದವರನ್ನು ಗಣನೆಗೆ ತೆಗೆದುಕೊಂಡು ಮಿತವಾಗಿ ಖರ್ಚು ಮಾಡಿ ಕೆಮಿಕಲ್ ಬಂಢಾರ ಹಾರಿಸದಂತೆ ನೋಡಿಕೊಳ್ಳಬೇಕು ಎಂದರು.
ಇನ್ನು ಎರಡು ಮೂರು ಬಾರಿ ಜಾತ್ರೆಯ ಬಗ್ಗೆ ಸಭೆ ಕರೆದು ಚರ್ಚಿಸಿ ಪ್ರತಿ ಸಮಾಜ, ವಾರ್ಡುಗಳಿಗೆ ತೆರಳಿ ಅವರ ವಿಚಾರ ಕೇಳಿ ಅದ್ದೂರಿಯಾಗಿ ಜಾತ್ರೆ ಮಾಡಲು ತಿಳಿಸಿ ಸ್ಥಳಿಯ ಮುಖಂಡರೋಡನೆ ಜಾತ್ರೆಯ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಶಿವಾನಂದ ಗಣಾಚಾರಿ,ಪುರಸಭೆ ಸದಸ್ಯರಾದ ಪ್ರಕಾಶ ಕರನಿಂಗ, ಮುಖ್ಯಾಧಿಕಾರಿ ಶಿವಾನಂದ ಹೀರೆಮಠ ಇವರು ಜಾತ್ರೆಗೆ ಬೇಕಾಗುವ ಸೌಲಭ್ಯಗಳನ್ನು ಪುರಸಭೆಯ ವತಿಯಿಂದ ಒದಗಿಸಿ ಕೊಡುತ್ತೇವೆಂದು ಭರವಸೆ ನೀಡಿದರು.
ಇವತ್ತಿನ ಕೊಣ್ಣೂರ ಗ್ರಾಮದೇವತೆಯ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪುರಸಭೆಯ ಅದ್ಯಕ್ಷ ವಿನೋದ ಕರನಿಂಗ, ಗೋಕಾಕ ತಹಸಿಲ್ದಾರ ಮೊಹನ ಬಸ್ಮೆ, ಸಿಪಿಆಯ್ ಆರ್, ಸುರೇಶಬಾಬು, ಪಿಎಸ್ಆಯ್ ಕೆವಾಲಿಕರ, ತಾಲೂಕಾ ಮಟ್ಟದ ಅಧಿಕಾರಿಗಳಾದ ಡಾ. ಅಂಟಿನ್, ಹೆಸ್ಕಾಂ ಅಧಿಕಾರಿ ಬಾಗಡಿ, ತಾಲೂಕಾ ವೈದ್ಯಾದಿಕಾರಿ ಮುತ್ತಪ್ಪ ಕೊಪ್ಪದ ಸೇರಿದಂತೆ ನೂರಾರು ಜನ ಬಾಗಿಯಾಗಿದ್ದರು, ಇನ್ನು ನ್ಯಾಯವಾದಿ ರಮೇಶ ಈರನಟ್ಟಿ ಸ್ವಾಗತಿಸಿ ವಂದಿಸಿದರು.