*ಬೆಳಗಾವಿಯಲ್ಲಿ ಯಶಸ್ವಿಯಾಗಿ ಆರಂಭವಾದ ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ, ಮಾರಾಟ ಮೇಳ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮಾಜ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಲಾಗಿರುವ 2 ದಿನಗಳ “ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ” ಶನಿವಾರ ಯಶಸ್ವಿಯಾಗಿ ಆರಂಭವಾಯಿತು.
ಬೆಳಗಾವಿಯ ಭಾಗ್ಯನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿಭೆ, ಪರಂಪರೆ ಮತ್ತು ಉದ್ಯಮಶೀಲತೆಗೆ ಚೈತನ್ಯ ನೀಡುವ ನಿಟ್ಟಿನಲ್ಲಿ ಇದೊಂದು ವೇದಿಕೆಯಾಗಿದೆ.
ಪಂಕ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕಿ ಹಾಗೂ ಪಂಕ್ ಹ್ಯಾಂಡಿಕ್ರಾಫ್ಟ್ಸ್ ಚಿಕ್ಕೋಡಿ ಸಹ ಸಂಸ್ಥಾಪಕಿ ಗೌರಿ ಮಂಜ್ರೆಕರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ, ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ್ ದೇಶಪಾಂಡೆ, ಬ್ರಾಹ್ಮಣ ಸಮಾಜ ಟ್ರಸ್ಟ್ ಕಾರ್ಯದರ್ಶಿ ವಿಲಾಸ್ ಬದಾಮಿ, ಟ್ರಸ್ಟಿ ಅನುಶ್ರೀ ದೇಶಪಾಂಡೆ ಹಾಗೂ ಇತರ ಟ್ರಸ್ಟಿಗಳು ಉಪಸ್ಥಿತರಿದ್ದರು. ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಗೌರಿ ಮಂಜ್ರೆಕರ ಅವರು ಮಹಿಳಾ ಸಬಲೀಕರಣ ಕುರಿತು ಮಾತನಾಡಿ, ಮಹಿಳೆಯರು ಧೈರ್ಯದಿಂದ ಉದ್ಯಮಶೀಲತೆಯತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿ ವಿಲಾಸ್ ಬದಾಮಿ ಅವರು ಧನ್ಯವಾದ ಅರ್ಪಿಸಿದರು.
ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಉದ್ಯಮಿಗಳು ಭಾಗವಹಿಸಿದ್ದಾರೆ. ವೈವಿಧ್ಯಮಯ ಉತ್ಪನ್ನಗಳನ್ನು – ಉಡುಪುಗಳು, ಆಭರಣಗಳು, ಆಹಾರ ಪದಾರ್ಥಗಳು, ಹಸ್ತಕಲಾ ವಸ್ತುಗಳು ಇತ್ಯಾದಿಗಳನ್ನು ಪ್ರದರ್ಶಿನಕ್ಕಿಟ್ಟಿದ್ದಾರೆ. ಇದು ಸಾಂಪ್ರದಾಯಿಕ ಹಬ್ಬದ ಛಾಯೆಯೊಂದಿಗೆ ವಿಶಿಷ್ಟ ಖರೀದಿ ಅನುಭವವನ್ನು ನೀಡುತ್ತಿದ್ದು, ಭಾನುವಾರವೂ ಮುಂದುವರಿಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಿಲಕವಾಡಿ ಬೆಳಗಾವಿಯ ಫ್ರೆಂಡ್ಸ್ ಸರ್ಕಲ್ ಗ್ರೂಪ್ ವತಿಯಿಂದ ಮಂಗಳಗೌರಿ ನೃತ್ಯ ಕಾರ್ಯಕ್ರಮ ಹಾಗೂ ನಿವೇದಾರ್ಪಣ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿಗಳಿಂದ ಮನಮೋಹಕ ಕರೋಕೆ ಸಂಗೀತ ಕಾರ್ಯಕ್ರಮ ನಡೆಯಿತು.
ಭಾನುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.