Belagavi NewsBelgaum NewsKarnataka NewsPolitics

*ಗುರುವಂದನೆ -ಸ್ನೇಹ ಸಮ್ಮಿಲನ ನಮ್ಮ ಸಂಸ್ಕೃತಿ- ಪರಂಪರೆ ಗಳ ಪ್ರತೀಕ : ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಹಳೆಯ ಘಟನೆಗಳ ಅವಲೋಕನ ನಾವು ಮುಂದೆ ಸಾಗಬೇಕಾದ ದಾರಿಯ ಕುರಿತು ಸ್ಪಷ್ಟತೆ ಒದಗಿಸುತ್ತದೆ. ನಮ್ಮ ಜೀವನದಲ್ಲಿ ದಾರಿ ತೋರಿದ ಶಿಕ್ಷಕರನ್ನು ಸ್ನೇಹಿತರೊಂದಿಗೆ ಗೌರವಿಸುವ ಇಂತಹ ಕಾರ್ಯಕ್ರಮ ನಮ್ಮ ಪರಂಪರೆ, ಸಂಸ್ಕೃತಿಯ ಪ್ರತೀಕ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಜನತಾ ವಿದ್ಯಾಲಯದ ಸನ್ 1992-93ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಳಗದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಜೀವನದಲ್ಲಿ ಬಹಳಷ್ಟು ಅವಿಸ್ಮರಣೀಯ ಘಟನೆಗಳು ನಡೆದಿರುತ್ತವೆ. ಆ ಸಂದರ್ಭದಲ್ಲಿ ನಮ್ಮೊಂದಿಗಿದ್ದವರೊಂದಿಗೆ ಅಂದಿನ ಘಟನೆಗಳನ್ನು ಸ್ಮರಿಸಿಕೊಳ್ಳುವುದರಲ್ಲಿರುವ ಖುಷಿಯೇ ಬೇರೆ. ಇಂತಹ ಸ್ನೇಹ ಸಮ್ಮಿಲನಗಳು ನಮಗೆ ಅಂತಹ ಅವಕಾಶವನ್ನು ಒದಗಿಸುತ್ತವೆ. ಜೊತೆಗೆ ಈ ರೀತಿ ನಮಗೆ ದಾರಿ ತೋರಿದ ಶಿಕ್ಷಕರನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಶ್ರೇಷ್ಠತೆನ್ನು ತೋರಿಸುತ್ತದೆ ಎಂದು ಚನ್ನರಾಜ ವಿವರಿಸಿದರು.

Home add -Advt


ಇಂತಹ ಅಪರೂಪದ ಕಾರ್ಯಕ್ಕಮದಲ್ಲಿ ಪಾಲ್ಗೊಂಡಿರುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ನಾವೆಲ್ಲ ನಮ್ಮ ಬೇರುಗಳನ್ನು ಮರೆಯಬಾರದು. ನಮ್ಮ ಊರು, ಕಲಿತ ಶಾಲೆ, ಹಳೆಯ ಸ್ನೇಹಿತರು, ಕಲಿಸಿದ ಗುರುಗಳು, ತಂದೆ- ತಾಯಿ ಇವರನ್ನೆಲ್ಲ ಜೀವನ ಪೂರ್ತಿ ಸ್ಮರಿಸಬೇಕು. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು. ಅದರಿಂದ ನಮ್ಮಲ್ಲಿ ಸಾರ್ಥಕತೆಯ ಭಾವನೆ ಮೂಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾಲಯದ ನಿವೃತ್ತ ಉಪಾಧ್ಯಾಯರಾದ ನಮಸಯ್ಯ ಹಿರೇಮಠ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮೃತಾ ಜಾಧವ್, ಕಾಂಗ್ರೆಸ್ ಮುಖಂಡರಾದ ನಾಗೇಶ್ ದೇಸಾಯಿ, ಮಹಾಂತೇಶ್ ಮತ್ತಿಕೊಪ್ಪ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ನಿಲೇಶ್ ಚಂದಗಡ್ಕರ್, ಗ್ರಾಮಸ್ಥರು, ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button