ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್
ಹೈದರಾಬಾದ್ : ಇಡೀ ದೇಶದ ಕ್ಷೋಭೆಯನ್ನು ಹದಗೆಡಿಸಿದ ದಿಶಾ ಪ್ರಕರಣವನ್ನು ಭೇದಿಸಲು ಮುಖ್ಯ ಸಾಕ್ಷ್ಯವಾದ ವೀಡಿಯೋ ಇದೀಗ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ತಿಂಗಳು 27 ರ ರಾತ್ರಿ ನಾಲ್ವರು ಆರೋಪಿಗಳು ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆಯ ನಂತರ, ಚಟ್ಟನ್ಪಲ್ಲಿಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಆರೋಪಿಗಳು ಮೃತಪಟ್ಟರು..
ಅತ್ಯಾಚಾರ ಮತ್ತು ಕೊಲೆಯ ಘಟನೆಗೆ ಸಂಬಂದಿಸಿದ ಪ್ರಮುಖ ವಿಡಿಯೋ ಹೊರಬಿದ್ದಿದೆ. ಇದೇ ವಿಡಿಯೋ ಆಧರಿಸಿ ಪೊಲೀಸರು ಪ್ರಕರಣ ಬಗೆಹರಿಸಿ ಆರೋಪಿಗಳನ್ನು ಗುರುತಿಸಿದ್ದರು. ನವೆಂಬರ್ 27 ರಂದು ರಾತ್ರಿ 10.28 ಕ್ಕೆ ತೋಡುಪಲ್ಲಿ ಟೋಲ್ಗೇಟ್ನಿಂದ ಲಾರಿ ಚಲಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಟೋಲ್ ಗೇಟ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಹೋಗುತ್ತಿರುವ ಲಾರಿಯನ್ನು ದಾಖಲಿಸಿವೆ.
ನವೆಂಬರ್ 27 ರಂದು ರಾತ್ರಿ 10 ಗಂಟೆ ಸುಮಾರಿಗೆ ಆರೋಪಿಗಳು ಅವಳನ್ನು ಕೊಂದು ನಂತರ ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ನಂತರ ಪೆಟ್ರೋಲ್ ಮತ್ತು ಸೀಮೆಎಣ್ಣೆ ಬಳಸಿ ಸುಟ್ಟುಹಾಕಿದ್ದರು. ಆರೋಪಿಗಳ ಲಾರಿ ವಿಡಿಯೋ ತುಣುಕು ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ