*ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಿಶೇಷ ಬಸ್ ವ್ಯವಸ್ಥೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025 ನೇ ಸಾಲಿನ ವಾ.ಕ.ರ.ಸಾ.ಸಂಸ್ಥೆ, ಚಿಕ್ಕೋಡಿ ವಿಭಾಗದಿಂದ ಗಣೇಶ ಹಬ್ಬದ ಪ್ರಯುಕ್ತ ಆಗಸ್ಟ್, 27. 2025 ರಂದು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಗೋಕಾಕ, ರಾಯಬಾಗ ಹಾಗೂ ಅಥಣಿ ಘಟಕಗಳಿಂದ ಬೆಂಗಳೂರು, ಪೂಣೆ, ಸಾತಾರಾ, ಇಚಲಕರಂಜಿ, ಕೊಲ್ಲಾಪೂರ, ಮಿರಜ ಹಾಗೂ ಇತರೇ ಅಂತರ ರಾಜ್ಯ ಮಾರ್ಗಗಳಿಗೆ ಆಗಸ್ಟ್ 22 ರಿಂದ 31 ರ ವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಗಣೇಶ ಹಬ್ಬ ಆಚರಿಸಲು ಬರುವ ಪ್ರಯಾಣಿಕರಿಗಾಗಿ ವಿಭಾಗದ ಎಲ್ಲ ಘಟಕಗಳಿಂದ ಮೂರು ದಿನಗಳ ಕಾಲ (ಆಗಸ್ಟ, 22,25,26) ಹೆಚ್ಚುವರಿ ವಾಹನಗಳನ್ನು ಬೆಂಗಳೂರಿನಿಂದ ವಿಭಾಗದ ತಾಲೂಕು ಕೇಂದ್ರಗಳಿಗೆ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಹೆಚ್ಚುವರಿ ಸಾರಿಗೆಗಳ ಪ್ರಯೋಜನ ಪಡೆಯಬಹುದಾಗಿದೆ ಎಂದು ಚಿಕ್ಕೋಡಿ ವಿಭಾಗ ವಾ.ಕ.ರ.ಸಾ.ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.