Belagavi NewsBelgaum NewsKannada NewsKarnataka News
*ಶ್ರದ್ಧಾ, ಭಕ್ತಿಯಿಂದ ನೆರವೆರಿದ ಶ್ರೀ ಹಾಲಸಿದ್ದೇಶ್ವರ ಹಾಗೂ ಶ್ರೀ ರಾಮಸಿದ್ದೇಶ್ವರ ಜಾತ್ರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೀಡಿಕನಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದoತೆ ಈ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಹಾಲಸಿದ್ದೇಶ್ವರ ಹಾಗೂ ಶ್ರೀ ರಾಮಸಿದ್ದೇಶ್ವರ ಜಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದು ಗ್ರಾಮದ ದೇವರುಗಳ ಆಗಮನ ಮಾಡಲಾಯಿತು. ಶ್ರೀ ಹಾಲಸಿದ್ದೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮಾಡಲಾಯಿತು. ಗ್ರಾಮದಲ್ಲಿ ಶ್ರೀಹಾಲಸಿದ್ದೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಿತು.
ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿದ್ಯುತ್ ಸಿoಗಾರ ಮಾಡಲಾಗಿತ್ತು ಹಾಗೂ ಬಾಳೆ, ಮಾವಿನ, ತೋರಿಣ ಕಟ್ಟಲಾಗಿತ್ತು. ಶ್ರೀಹಾಲಸಿದ್ದೇಶ್ವರ ಜಾತ್ರೆಯ ಪ್ರಯುಕ್ತ ಗ್ರಾಮದ ಸುತ್ತಮುತ್ತಲಿನ ನಾಲ್ಕು ಸಾವಿರ ಜನರು ದೇವರ ದರ್ಶನ ಪಡೆದುಕೊಂಡ್ದರು. ಜಾತ್ರೆಯ ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಜಾತ್ರೆ ಕಮೀಟಿ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.