
ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಕಲಾಪದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಆರ್ ಎಸ್ ಎಸ್ ಗೀತೆ ಹಾಡುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ವಿಚಾರವಗಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್, ಆರ್ ಸಿಬಿ ಗೆಲುವಿನಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಎದ್ದುನಿಂತ ಡಿಸಿಎಂ ನಾನು ಕ್ರಿಕೆಟ್ ಅಭಿಮಾನಿ. ಕೆ ಎಸ್ ಸಿ ಎ ಸದಸ್ಯ. ಹಾಗಾಗಿ ಕ್ರೀಡಾಂಗಣಕ್ಕೆ ಹೋಗಿದ್ದೆ. ಕಪ್ ಗೆ ಮುತ್ತಿಟ್ಟಿದ್ದೆ. ಈ ವೇಳೆ ಆರ್ ಎಸ್ ಎಸ್ ಚಡ್ಡಿ ಹಾಕಿದ್ರಲ್ಲ ಎಂದು ಅಶೋಕ್ ಟಾಂಗ್ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ‘ನಮಸ್ತೆ ಸದಾ ವತ್ಸಲೆ ಮಾತೃಭೂಮೇ’ ಎಂಬ ಆರ್ ಎಸ್ ಎಸ್ ಹಾಡು ಹಾಡಿ ಈಗ ಅದೆಲ್ಲ ವಿಚಾರ ಚರ್ಚೆ ಬೇಡ. ಎಲ್ಲಾ ಸಂಘ-ಸಂಸ್ಥೆಗಳಲ್ಲಿಯೂ ಒಳ್ಳೆಯ ಗುಣಗಳಿವೆ. ಆದರೆ ಬಿಜೆಪಿ ರಾಜಕೀಯ ಮಾತ್ರ ಮಾಡುತ್ತಿದೆ ಎಂದು ತಿರುಗೇಟು ನೀಡಿದರು. ನಾನು ಆರ್ ಎಸ್ ಎಸ್ ಬಗ್ಗೆಯೂ ರಿಸರ್ಚ್ ಮಾಡಿದ್ದೇನೆ, ಕಮ್ಯೂನಿಸ್ಟ್ ಬಗ್ಗೆಯೂ ಮಾಡಿದ್ದೇನೆ. ಬಿಜೆಪಿ, ಜನತಾದಳದ ಬಗ್ಗೆಯೂ ಮಾಡಿದ್ದೇನೆ ಎಲ್ಲದರಲ್ಲಿಯೂ ಒನ್ನೊಂದು ಒಳ್ಳೆ ಗುಣಗಳಿವೆ ಅದನ್ನು ಆಯ್ಕೆ ಮಾಡಿ ಕೆಲ ಮಾತನ್ನು ಪ್ರಸ್ತಾಪಿಸಿದ್ದೆನೆ. ಆದರೆ ಬಿಜೆಪಿಯವರು ಮಾತ್ರ ಬರೀ ರಾಜಕೀಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.