*ಭಾರಿ ಮಳೆಗೆ ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ: ಜನಜೀವನ ಅಸ್ತವ್ಯಸ್ಥ: ಐವರು ಸಾವು: ಈರಣ್ಣ ಕಡಾಡಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ, ಮಳೆಯಿಂದ ಉಂಟಾಗಿರುವ ಜೀವಹಾನಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ಮತು ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ ೪೪೮ ಮಿಮೀ ಆಗಬೇಕಿತ್ತು. ಆದರೆ. ಪ್ರಸ್ತುತ ೫೬೩ ಮಿ.ಮೀ ಮಳೆಯಾಗಿದೆ. ಹೆಚ್ಚುವರಿ ೧೧೫ ಮಿ.ಮೀ ಆಗಿದೆ.
ಮಹಾರಾಷ್ಟ್ರದ ರಾಜಾಪುರ ಮತ್ತು ಕೊಯ್ನಾ ಜಲಾಶಯಗಳು ಭರ್ತಿಯಾಗಿದ್ದು, ಸುಮಾರು ೨ ಲಕ್ಷ ೫೧ ಸಾವಿರ ಕ್ಯುಸೆಕ್‌ಗಿಂತ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ಘಟಪ್ರಭಾ ನದಿಗೂ ಕೂಡ ೪೬ ಸಾವಿರ ಕ್ಯುಸೆಕ್‌ಗಿಂತ ಹೆಚ್ಚು ನೀರು ಹರಿದು ಬರುತ್ತಿರುವ ಪರಿಣಾಮವಾಗಿ ಈ ಎರಡು ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. (ದಿನಾಂಕ ೨೨-೦೮-೨೦೨೫ ರಂತೆ)
ಘಟಪ್ರಭಾ ನದಿಗೆ ಅತಿ ಹೆಚ್ಚು ಆಗಸ್ಟ್ ೨೦ ರಂದು ೬೫ ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ. ಆಗಸ್ಟ್ ೨೨ ರಂದು ಕೃಷ್ಣಾ ನದಿಗೆ ಅತಿ ಹೆಚ್ಚು ೨ ಲಕ್ಷ ೫೧ ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ ಎಂದರು.
ಈ ಎರಡು ನದಿಗಳ ಪ್ರವಾಹದಲ್ಲಿ ೪೩ ಸೇತುವೆಗಳು ಮುಳುಗಡೆಯಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಒಟ್ಟು ೯ ಕಾಳಜಿ ಕೇಂದ್ರಗಳಲ್ಲಿ ೪೨೦ ಕ್ಕೂ ಅಧಿಕ ಕುಟುಂಬಗಳ ೧೮೪೦ಕ್ಕೂ ಅಧಿಕ ಸಂತ್ರಸ್ತರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಹಲವು ಜನರು ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಜಿಲ್ಲೆಯಲ್ಲಿ ೩೦೬ ಶಾಲಾ ಕೋಠಡಿಗಳು, ೪೪ ಅಂಗನವಾಡಿ ಕೇಂದ್ರಗಳು, ೩ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿವೆ.
ಜಿಲ್ಲೆಯಲ್ಲಿ ಸಂಪೂರ್ಣ ಹಾನಿಗೊಳಗಾದ ಮನೆಗಳು ೧೯, ಭಾಗಶ ಹಾನಿಗೊಳಗಾದ ಮನೆಗಳು (ಶೇ ೫೦%-೭೫%) ೩೧, (೨೦%-೫೦%) ೭೪, (೧೫%-೨೦%) ೫೪ ಮನೆಗಳು ಹಾನಿಯಾಗಿವೆ
ಈ ಮಾರ್ಗಸೂಚಿ ದರ
ಬಿಜೆಪಿ ಸರ್ಕಾರ ನೀಡಿದ ಪರಿಹಾರ
ಬಿಜೆಪಿ ಸರ್ಕಾರ ನೀಡಿದ ಹೆಚ್ಚುವರಿ ದರ
ಕಾಂಗ್ರೇಸ್ ಸರ್ಕಾರ (೨೦೨೫) ಮಾರ್ಗಸೂಚಿ (ಪ್ರಸ್ತುತ)
ಸಂಪೂರ್ಣ ಹಾನಿಗೊಳಗಾದ ಮನೆಗಳು (ಶೇ೭೫ಕ್ಕಿಂತ ಹೆಚ್ಚು)
೯೫,೧೦೦
೫,೦೦,೦೦೦
೪,೦೪,೯೦೦
೧,೨೦,೦೦೦
+೧,೫೦,೦೦೦
೨,೭೦,೦೦೦
ತೀವ್ರ ಹಾನಿಯಾದ ಮನೆಗಳು (೨೫%-೭೫%)
೬,೫೦೦
೩,೦೦,೦೦೦
೨,೦೪,೯೦೦
೬೫೦೦
ಭಾಗಶಃ ಹಾನಿಯಾದ ಮನೆಗಳು (ಶೇ ೧೫%-೨೫%)
೫,೨೦೦
೫೦,೦೦೦
೪೪,೮೦೦
೩೦,೦೦೦
ಇದೂ ಅಲ್ಲದೆ ಬಿ.ಜೆ.ಪಿ ಸರ್ಕಾರವು ಹೆಚ್ಚುವರಿಯಾಗಿ ತೀವ್ರ ಹಾನಿಯಾದ ಮನೆಗೆಳಿಗೆ ರೂ.೫,೦೦,೦೦೦/- ಗಳ ಪರಿಹಾರ ನೀಡಿದೆ.
ತಾತ್ಕಾಲಿಕ ನಿರಾಶ್ರಿತರಿಗೆ ದಿನನಿತ್ಯದ ವೆಚ್ಚಕ್ಕಾಗಿ ೧೦,೦೦೦ ರೂಪಾಯಿ ಮುಂಗಡ ಪರಿಹಾರವನ್ನು ಬಿಜೆಪಿ ಸರ್ಕಾರ ನೀಡಿದೆ.
ಪ್ರಸ್ತುತ ಕಾಂಗ್ರೇಸ್ ಸರ್ಕಾರ ತಾತ್ಕಾಲಿಕ ನಿರಾಶ್ರಿತರಿಗೆ ದಿನನಿತ್ಯದ ವೆಚ್ಚಕ್ಕಾಗಿ ೨೫೦೦ ರೂಪಾಯಿಗಳನ್ನು ನೀಡುತ್ತಿದೆ.
ಜಿಲ್ಲೆಯಲ್ಲಿ ಸುಮಾರು ೪೫,೭೬೫ ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಜಮೀನಿನ ಬೆಳೆ ಹಾನಿಯಾಗಿದೆ ಹಾಗೂ ೧,೫೦೧ ಹೆಕ್ಟೇರ್‌ಗಿಂತ ಹೆಚ್ಚು ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಮಾರ್ಗಸೂಚಿ (೩೩% ಕ್ಕಿಂತ ಹೆಚ್ಚಾದ ಹಾನಿಗೆ)
ಬಿಜೆಪಿ ಸರ್ಕಾರ
ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ನೀಡಿದ ಪರಿಹಾರ
ಕಾಂಗ್ರೇಸ್ ಸರ್ಕಾರ Sಆಖಈ/ಓಆಖಈ (೨೦೨೫) ಮಾರ್ಗಸೂಚಿ (ಪ್ರಸ್ತುತ)
ಮಳೆಯಾಶ್ರಿತ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೬೮೦೦
ಮಳೆಯಾಶ್ರಿತ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೧೬೮೦೦
೧೦೦೦೦
ಮಳೆಯಾಶ್ರಿತ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೮೫೦೦
ನೀರಾವರಿ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೧೩೫೦೦
(ಕೃಷಿ, ತೋಟಗಾರಿಕೆ)
ನೀರಾವರಿ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೨೩೫೦೦
(ಕೃಷಿ, ತೋಟಗಾರಿಕೆ)
೧೦೦೦೦
ನೀರಾವರಿ ಪ್ರದೇಶ ಪ್ರತಿ ಹೆಕ್ಟರ್‌ಗೆ- ರೂ.೧೭,೦೦೦
(ಕೃಷಿ, ತೋಟಗಾರಿಕೆ)
ಧೀರ್ಘಾವದಿ ಬೆಳೆ ಪ್ರತಿ ಹೆಕ್ಟರ್‌ಗೆ- ರೂ.೧೮೫೦೦
ಧೀರ್ಘಾವದಿ ಬೆಳೆ ಪ್ರತಿ ಹೆಕ್ಟರ್‌ಗೆ- ರೂ.೨೮೫೦೦
೧೦೦೦೦
ಧೀರ್ಘಾವದಿ ಬೆಳೆ ಪ್ರತಿ ಹೆಕ್ಟರ್‌ಗೆ- ರೂ.೨೨೫೦೦
ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ೧೫.೮೪ ಕಿ.ಮೀ, ಜಿಲ್ಲಾ ಹೆದ್ದಾರಿ ೩೪.೪೫ ಕಿ.ಮೀ, ಗ್ರಾಮೀಣ ರಸ್ತೆಗಳು ೪೧ ಕಿ.ಮೀ ಮತ್ತು ೩೦ ಸೇತುವೆಗಳು ಹಾನಿಗೊಳಗಾಗಿವೆ.
ಜಿಲ್ಲೆಯಲ್ಲಿ ಸುಮಾರು ೫ ಜನರ ಜೀವ ಹಾನಿಯಾಗಿದ್ದು, ಗಾಯಗೊಂಡವರು ೭ ಜನ ಹಾಗೂ ೩ ದನಕರುಗಳು ಮೃತಪಟ್ಟಿವೆ.
ಮಾರ್ಗಸೂಚಿ ಬಿಜೆಪಿ ಸರ್ಕಾರ
ಮೃತ ವ್ಯಕ್ತಿಗೆ
೪,೦೦,೦೦೦ +೧,೦೦,೦೦೦
ಕೇಂದ್ರ ರಾಜ್ಯ
ಅಂಗಾಗಳನ್ನು ಕಳೆದು ಕೊಂಡಿದ್ದರೆ (ಶೇ೪೦% -೬೦%)
೭೪,೦೦೦
ಶೇ ೬೦% ಹೆಚ್ಚಿಗೆ ಇದ್ದರೆ
೨,೫೦,೦೦೦
ಗಾಯಾಳು ಒಂದು ವಾರಕ್ಕಿಂತ ಹೆಚ್ಚು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ
೧೬,೦೦೦
ವಾರಕ್ಕಿಂತ ಕಡಿಮೆ ಇದ್ದರೆ
೫,೪೦೦
ಆಕಳು, ಎಮ್ಮು, ಎತ್ತು, ಒಂಟೆ
೩೭೫೦೦
ಆಡು, ಟಗರು, ಹಂದಿ
೪೦೦೦