
ಪ್ರಗತಿವಾಹಿನಿ ಸುದ್ದಿ: ಬರೋಬ್ಬರಿ 65,000 ರೂಪಾಯಿ ಪೆನ್ ಕಳೆದುಕೊಂಡಿದ್ದ ಶಾಸಕ ಅಶೋಕ್ ರೈ ಸದ್ಯ ಪೆನ್ ಸಿಕ್ಕಿರುವುದಾಗಿ ಹೇಳಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಮೈಸೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅವರ 65 ಸಾವಿರ ರೂಪಾಯಿ ಮೌಲ್ಯದ ಪೆನ್ ಕಾಣೆಯಾಗಿತ್ತು. ಕಳೆದ ಮೂರು ದಿನಗಳಿಂದ ಪೆನ್ ಗಾಗಿ ಶಾಸಕರು ಹುಡುಕಾಟ ನಡೆಸಿದ್ದರು. ಆದಾಗ್ಯೂ ಪೆನ್ ಸಿಕ್ಕಿರಲಿಲ್ಲ.
ಇದೀಗ ಶಾಸಕರ ಕಾಣೆಯಾಗಿದ್ದ ಪೆನ್ ಮರಳಿ ಸಿಕ್ಕಿದೆ. ಮೈಸೂರಿಗೆ ಶಸಾಕರು ಹೋಗಿದ್ದ ವೇಳೆ ಅಲ್ಲಿ ಅವರಿಗೆ ಸನ್ಮಾನ ಮಾಡಲಗಿತ್ತು. ಈ ವೇಳೆ ಪೆನ್ ಕಾಣೆಯಾಗಿದೆ. ಪೆನ್ ಕಾಣೆಯಾದ ವಿಚಾರವನ್ನು ಸ್ನೇಹಿತ ದಿವಾಕರ್ ದಾಸ್ ಅವರಿಗೆ ಶಾಸಕರು ಹೇಳಿದ್ದರು. ಅವರು ತಮ್ಮ ಆಪ್ತರಿಗೆ ತಿಳಿಸಿದ್ದರು. ಈ ವೇಳೆ , ಮಹಿಳೆಯೊಬ್ಬರು ಕರೆ ಮಾಡಿ ಶಾಸಕರ ಸನ್ಮಾನ ಮಾಡಿದ ಶಾಲ್ ನಲ್ಲಿ ಪೆನ್ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಇದನ್ನು ಪರಿಶೀಲಿಸಿದಾಗ ಶಾಸಕರು ಕಳೆದುಕೊಂಡಿದ್ದ ದುಬಾರಿ ಪೆನ್ ಎಂಬುದು ದೃಢವಾಗಿದೆ. ಸದ್ಯ ಕಳೆದುಹೋಗಿದ್ದ 65 ಸಾವಿರ ರೂಪಾಯಿ ಪೆನ್ ಶಾಸಕರ ಕೈ ಸೇರಿದೆ.