Kannada NewsKarnataka NewsLatest
*ಗುಟ್ಕಾ ಚಟಕ್ಕೆ ಬಿದ್ದ 9ನೇ ತರಗತಿ ವಿದ್ಯಾರ್ಥಿ: ಅಜ್ಜಿ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಗುಟ್ಕಾ ತಿನ್ನಬೇಡ ಎಂದು ಅಜ್ಜಿ ಮೊಮ್ಮಗನಿಗೆ ಬುದ್ಧಿ ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ಕಲಬುರಗಿಯಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿ ರೋಹಿತ್ ಮಣ್ಣಾಂಕಲಗಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ದಮಯಂತಿ ಎಂಬ ಅಜ್ಜಿ ತನ್ನ ಮೊಮ್ಮಗ ರೋಹಿತ್ ನನ್ನು ಸಾಕಿ ಸಲಹುತ್ತಾ ವಿದ್ಯಾಭ್ಯಾಸ ಕಲಿಸುತ್ತಿದ್ದರು.
9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಸ್ನೇಹಿತರೊಂದಿಗೆ ಸೇರಿ ಗುಟ್ಕಾ ತಿನ್ನುತ್ತಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಅಜ್ಜಿ ಮೊಮ್ಮಗನಿಗೆ ಬುದ್ಧಿ ಹೇಳಿದ್ದಾರೆ. ಗುಟ್ಕಾ ತಿನ್ನಬೇಡ ಆರೋಗ್ಯ, ಶರೀರ ಹಾಳಾಗುತ್ತೆ ಎಂದು ಬೈದಿದ್ದಾರೆ.
ಅಜ್ಜಿ ಬುದ್ಧಿ ಹೇಳಿದ್ದನ್ನೇ ನೆಪ ಮಾಡಿಕೊಂಡ ಮೊಮ್ಮಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.