Belagavi NewsBelgaum NewsKannada NewsKarnataka NewsPolitics

*ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ: ಮಹಾಂತೇಶ ಕಮತ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಕೃಷಿ ಹಿನ್ನಲೆ ಇಲ್ಲದ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಕೊರತೆಯಿಂದ ಮತ್ತು ಹಿನ್ನಲೆ‌ ಇದ್ದವರಿಗೆ ಜನರು ಬೆಂಬಲಿಸದೆ ಇರುವದರಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನೀರಾವರಿ ವಂಚಿತರಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಕೂಲಿ ಕಾರ್ಮಿಕರ  ಸಂಘಟನೆಯ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಆಕ್ರೋಶ ವ್ಯಕ್ತಪಡಿಸಿದರು.

ಬೈಲಹೊಂಗಲ ಸಮೀಪದ ಜಾಲಿಕೊಪ್ಪ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮತಕ್ಷೇತ್ರದ ಬೆಳವಡಿ, ಬುಡರಕಟ್ಟಿ, ದೊಡವಾಡ ಭಾಗದ ಲಕ್ಷಾಂತರ ಎಕರೆ ಜಮೀನು ಮಲಪ್ರಭಾ ‌ನದಿ ದಡಕ್ಕೆ ಹೊಂದಿಕೊಂಡಿದ್ದರು ಯಾವುದೆ ನೀರಾವರಿ‌ ಕಂಡಿಲ್ಲ. ಸರ್ಕಾರಿ ದಾಖಲೆಗಳಲ್ಲಿ ನೀರಾವರಿ ಅಂತ ಇದ್ದು ಯಾವುದೆ ಬೆಳೆ  ಪರಿಹಾರು ರೈತರಿಗೆ ದೊರೆಯುವದಿಲ್ಲ. ಇದಕ್ಕೆಲ್ಲ ರೈತ ಮನೆತನ ಹಿನ್ನಲೆ ಇಲ್ಲದ ಜನಪ್ರತಿನಿಧಿಗಳು ನೀರಾವರಿ ಬಗ್ಗೆ ಮಾಡಿದ ಅಸಡ್ಡೆಯಾಗಿದೆ. ಇನ್ನು ಕೃಷಿ ಹಿನ್ನಲೆಯುಳ್ಳ ಜನಪ್ರತಿನಿಧಿ ಬಂದಾಗ ಅವರಿಗೆ ಜನತೆ ಸ್ಪಂದಿಸದೆ ಇದ್ದರಿಂದ ಈ ಭಾಗದ ಜನತೆ ಇಂದು ಕಷ್ಟ ಅನುಭವಿಸಬೇಕಾಗಿದೆ. ಬರುವ ದಿನಗಳಲ್ಲಿ ರೈತರ ಹಾಗೂ ಅವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ‌ ಭಾಗದ ಜಮೀನುಗಳಿಗೆ ನೀರಾವರಿ ಕಲ್ಪಿಸಲು ಹೋರಾಟ ನಡೆಸೊಣ ಹಾಗೂ ಜಾಲಿಕೊಪ್ಪ ತಪೊವಣದ ಶಿವಾನಂದ ಶ್ರೀಗಳ ನೇತೃತ್ವದಲ್ಲಿ ಮಲಪ್ರಭಾ ಸ್ವಚ್ಚತಾ ಕಾರ್ಯಕ್ರಮ  ಮಲಪ್ರಭಾ ಆರತಿ ಕಾರ್ಯಕ್ರಮ ಹಾಗೂ ಜಿವ ಜಲದ ಮಹತ್ವ ನಾಡಿಗೆ ಹರಡೊಣ ಎಂದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ವಿ.ಆಯ್.ಪಾಟೀಲ, ಮಲ್ಲಪ್ಪ ಮುರಗೋಡ ಇದ್ದರು.

Home add -Advt

Related Articles

Back to top button